

ಮಂಗಳೂರು: ಚಿನ್ನವನ್ನು ಸೂಟ್‌ಕೇಸ್ ಅಡಿಯಲ್ಲಿ ಅಡಗಿಸಿಕೊಂಡೊಯ್ಯುತ್ತಿದ್ದ ಇಬ್ಬರನ್ನು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನದಲ್ಲಿ ಕಸ್ಟಂಸ್ ಸಿಬ್ಬಂದಿ ಬಂಧಿಸಿದ್ದಾರೆ. ಅವರಿಂದ 34,46,464 ರೂ. ಮೌಲ್ಯದ ಪೇಸ್ಟ್ ರೂಪದಲ್ಲಿ ಇದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಉಪ್ಪಳ ನಿವಾಸಿ ಮೊಹಮ್ಮದ್ ಅನ್ಸಾರ್ ಕಯ್ಯಾರ್(34) ಹಾಗೂ ಕೋಝಿಕ್ಕೋಡ್‌ನ ಮೊಹಮ್ಮದ್ ಮೂಸಾ ಮಿಯಾಸ್(18) ಬಂಧಿತರು. ಒಟ್ಟು 703 ಗ್ರಾಮ್ ಚಿನ್ನ ಸಿಕ್ಕಿರುತ್ತದೆ. ದುಬೈನಿಂದ ಗುರುವಾರ ಆಗಮಿಸಿದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಈ ಪ್ರಯಾಣಿಕರು ಚಿನ್ನವನ್ನು ಅಡಗಿಸಿ ತಂದಿದ್ದು ಕಸ್ಟಂಸ್‌ನವರು ತಪಾಸಣೆ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಕಾರ್ಯಾಚರಣೆಯಲ್ಲಿ ಕಸ್ಟಂಸ್ ಉಪಾಯುಕ್ತ ಪ್ರವೀಣ್ ಕಂಡಿ, ಅಧೀಕ್ಷಕರಾದ ನಾಗೇಶ್ ಕುಮಾರ್, ಮನೋಕಾತ್ಯಾಯಿನಿ ಮತ್ತಿತರರು ಪಾಲ್ಗೊಂಡರು.