ಅಜ್ಜಿಯೊಂದಿಗೆ ಫ್ಲ್ಯಾಟ್​ ನೋಡಲು ಹೋಗಿದ್ದ 2 ವರ್ಷದ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವು!

Divyamsh
Published on

ಬೆಂಗಳೂರು: ಅಜ್ಜಿಯೊಂದಿಗೆ ಫ್ಲ್ಯಾಟ್ ನೋಡಲು ಹೋಗಿದ್ದ ಎರಡು ವರ್ಷದ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವಿಗೀಡಾದ ದುರಂತವೊಂದು ನಗರದಲ್ಲಿ ಸಂಭವಿಸಿದೆ. ದಿವ್ಯಾಂಶ್​ ರೆಡ್ಡಿ (2) ಸಾವಿಗೀಡಾದ ಬಾಲಕ.

ಎಲೆಕ್ಟ್ರಾನಿಕ್​ ಸಿಟಿಯ ಇನ್​ವೆಸ್​ಮೆಂಟ್​ ಲೇಔಟ್​ನಲ್ಲಿ ಈ ಅವಘಡ ಸಂಭವಿಸಿದೆ. ದಿವ್ಯಾಂಶ್​ನ ಅಜ್ಜಿ ಕೆಲವು ದಿನಗಳಿಂದ ಬಾಡಿಗೆ ಮನೆಗಾಗಿ ಹುಡುಕಾಟ ನಡೆಸುತ್ತಿದ್ದರು.

ಇಂದು ಸಂಜೆ ಇನ್​ವೆಸ್​ಮೆಂಟ್​ ಲೇಔಟ್​ನ ಅಪಾರ್ಟ್​ಮೆಂಟ್​ವೊಂದರಲ್ಲಿನ ಫ್ಲ್ಯಾಟ್​ ನೋಡಲು ಹೋಗುವಾಗ ಅಜ್ಜಿ ದಿವ್ಯಾಂಶ್​ನನ್ನು ಕರೆದುಕೊಂಡು ಹೋಗಿದ್ದರು.

ಅಜ್ಜಿ ಫ್ಲ್ಯಾಟ್​ ನೋಡುತ್ತಿದ್ದಾಗ ಬಾಲಕ ಆಯತಪ್ಪಿ ಐದನೇ ಮಹಡಿಯಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net