ಸುಳ್ಯ ಎಣ್ಮೂರಿನಲ್ಲಿ ಗೋಡೆ ಕುಸಿದು ಇಬ್ಬರ ಸಾವು

deadbody
Published on

ಸುಳ್ಯ: ಸುಳ್ಯ ತಾಲೂಕಿನ ಎಣ್ಮೂರು ಎಂಬಲ್ಲಿ ಮನೆಯ ಶೌಚಗೃಹದ ರಿಪೇರಿ ನಡೆಸುವ ವೇಳೆ ಗೋಡೆ ಕುಸಿತು ಇಬ್ಬರು ಮಹಿಳಾ ಕಾರ್ಮಿಕರು ಮೃತರಾದ ಘಟನೆ ಭಾನುವಾರ ನಡೆದಿದೆ.
ಎಣ್ಮೂರಿನ ನರ್ಲಡ್ಕದ ಹರೀಶ್‌ ಎಂಬವರ ಮನೆಯಲ್ಲಿ ನಡೆದ ಕೆಲಸದ ವೇಳೆ ದುರ್ಘಟನೆ ಸಂಭವಿಸಿದೆ. ಬೀಪಾತುಮ್ಮ(60) ಮತ್ತು ನೆಬಿಸಾ(45) ಮೃತರು. ಕೆಲಸದ ವೇಳೆ ಇಟ್ಟಿಗೆ ಗೋಡೆ ಕುಸಿದು ಇಬ್ಬರೂ ಗಂಭೀರಗಾಯಗೊಂಡರು. ಆಸ್ಪತ್ರೆಗೆ ಕೊಂಡೊಯ್ಯುವ ದಾರಿಯಲ್ಲಿ ಅಸುನೀಗಿರುವುದಾಗಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net