ಅಪಘಾತದಲ್ಲಿ ಇಬ್ಬರು ಮಹಿಳೆಯರು ಸಾವು

accident-15
Published on

ರಾಮದುರ್ಗ/ಅಥಣಿಗ್ರಾಮೀಣ: ಜಿಲ್ಲೆಯಲ್ಲಿ ಪ್ರತ್ಯೇಕ ಕಡೆ ಸಂಭವಿಸಿದ ಅಪಘಾತದಲ್ಲಿ ಓರ್ವ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಟನೆ ಸೋಮವಾರ ನಡೆದಿದೆ.

ರಾಮದುರ್ಗ ಪಟ್ಟಣದ ಜುನಿಪೇಟೆಯ ಮುಖ್ಯ ರಸ್ತೆಯಲ್ಲಿ ಸ್ಕೂಟರ್​ಗೆ ಹಿಂಬದಿಯಿಂದ ಬಸ್​ ಡಿಕ್ಕಿ ಹೊಟೆದ ಪರಿಣಾಮ ತಾಲೂಕಿನ ಹಳೆತೊರಗಲ್​ ಗ್ರಾಮದ ಗೀತಾ ಚಂದನಗೌಡ ಪಾಟೀಲ (26) ಸ್ಥಳದಲ್ಲೇ ಮೃತಪಟ್ಟರೆ, ಮೃತಳ ಮಗಳು ಸಮದ್ಧಿ, ಪತಿ ಚಂದನಗೆ ಸಣ್ಣಪುಟ್ಟ ಗಾಯಗಳಾಗಿವೆ. ಗೀತಾ 6 ತಿಂಗಳು ಗರ್ಭಿಣಿಯಾಗಿದ್ದು ಸ್ಕೂಟರ್​ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಮುನವಳ್ಳಿಯಿಂದ ರಾಮದುರ್ಗ ಕಡೆಗೆ ಬರುತ್ತಿದ್ದ ಬಸ್​ ಹಿಂಬದಿ ಡಿಕ್ಕಿ ಹೊಡೆದಿದೆ.

ಅಥಣಿ ತಾಲೂಕಿನ ಖೋತನಹಟ್ಟಿ ಕ್ರಾಸ್​ನಲ್ಲಿ ಚಲಿಸುತ್ತಿದ್ದ ಬೈಕ್​ಗೆ ಹಿಂಬದಿಯಿಂದ ಕ್ರೂಸರ್​ ಡಿಕ್ಕಿ ಹೊಡೆದ ಪರಿಣಾಮ ಖೋತನಹಟ್ಟಿ ಗ್ರಾಮದ ಮಹಾನಂದಾ ಭರತ ಪವಾರ (42) ಮೃತಪಟ್ಟರೆ, ಈಕೆಯ ಪತಿ ಭರತ ಭಗವಂತ ಪವಾರ (54) ಗಾಯಗೊಂಡು ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಕ್​ ಮೇಲೆ ದಂಪತಿ ಅಥಣಿಯಿಂದ ಖೋತನಹಟ್ಟಿಗೆ ತೆರಳುತ್ತಿರುವಾಗ ವಿಜಯಪುರಕ್ಕೆ ತೆರಳುತ್ತಿದ್ದ ಕ್ರೂಸರ್​ ವಾಹನ ಡಿಕ್ಕಿ ಹೊಡೆದು ಈ ಅವಡವಾಗಿದೆ.

ಪೊಲೀಸ್​ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net