ದ್ವಿಚಕ್ರ ವಾಹನ ಸವಾರ ಸಾವು

accident-15
Published on

ಖಾನಾಪುರ: ಖಾನಾಪುರ&ಯಲ್ಲಾಪುರ ಹೆದ್ದಾರಿ ರಸ್ತೆಯ ಜುಂಜ್​ವಾಡ ಬಳಿ ಸೋಮವಾರ ಧಾರವಾಡ ಕಡೆಗೆ ಚಲಿಸುತ್ತಿದ್ದ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಧಾರವಾಡ ತಾಲೂಕು ಕೊಟ್ಟೂರಿನ ಆಯುಂ ಅಕ್ಬರ್​ ನಾಯಿಕ್​ (26) ಮತಪಟ್ಟ ಬೈಕ್​ ಸವಾರ. ಖಾನಾಪುರ ತಾಲೂಕಿನ ನಂದಗಡ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಪ್ರಕರಣ ದಾಖಲಿಸಿಕೊಂಡ ನಂದಗಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಖಾನಾಪುರದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net