ಸಾರ್ವಜನಿಕ ದ್ವಿಚಕ್ರ ವಾಹನ ಜಾಥಾ

PTR_16 APR_4
Published on

ಪುತ್ತೂರು: ತಾಲೂಕು ಸ್ವೀಪ್ ಸಮಿತಿ, ಪುತ್ತೂರು ತಾಲೂಕು ಆಡಳಿತ ಮತ್ತು ಪುತ್ತೂರು ನಗರಸಭೆ ವತಿಯಿಂದ ದರ್ಬೆ ವೃತ್ತದಿಂದ ಕಿಲ್ಲೆ ಮೈದಾನವರೆಗೆ ಸಾರ್ವಜನಿಕ ದ್ವಿಚಕ್ರ ವಾಹನ ಜಾಥಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ಸರಕಾರಿ ನೌಕರರು, ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುರ್ವ ಕಾರ್ಯ ಮಾಡಿದರು.

ಪೌರಾಯುಕ್ತ ಬದ್ರುದ್ದಿನ್ ಸೌದಾಗರ, ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್ ರೈ, ಸಹಾಯಕ ಅಭಿಯಂತರ ಕೃಷ್ಣ ಮೂರ್ತಿ ರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಕೆ, ಶ್ವೇತಾಕಿರಣ್, ನಗರಸಭೆ ನೀರು ಸರಬರಾಜು ವಿಭಾಗ ಜಲಸಿರಿಯ ರೆಸಿಡೆಂಟ್ ಇಂಜಿನಿಯರ್ ಸಂದೇಶ್, ಸಹಾಯಕ ಇಂಜಿನಿಯರ್ ಸುನೀಲ್, ಸೋಶಿಯಲ್ ಡೆವೋಲಪ್ಮೆಂಟ್ ಕನ್ಸಲ್ಟನ್ಟ್ ಅರ್ಪಿತಾ ಹಾಗೂ ನಗರಸಭೆ, ತಾಲೂಕು ಪಂಚಾಯಿತಿ, ಜಲಸಿರಿ ಸಿಬ್ಬಂದಿಗಳು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net