

ಮುದಗಲ್: ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಡಿಎನ್‌ಆರ್ ಕಂಪನಿಯ ಎರಡು ಟಿಪ್ಪರ್‌ಗಳನ್ನು ಸ್ಥಳೀಯ ಠಾಣೆ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
ಟಿಪ್ಪರ್ ಮೂಲಕ ಹೆದ್ದಾರಿ ಕಾಮಗಾರಿಗೆ ಜಲ್ಲಿಕಲ್ಲು ಸಾಗಣೆ ಮಾಡಲಾಗುತ್ತಿದೆ. ಆದರೆ, ಪರವಾನಗಿ ಇಲ್ಲದೆ ಎರಡು ಟಿಪ್ಪರ್‌ಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದಾರೆ. ಕಳೆದ ಹತ್ತಾರು ತಿಂಗಳಿಂದ ಟಿಪ್ಪರ್‌ಗಳ ಓಡಾಟ ಹೆಚ್ಚಾಗಿದ್ದು ಪಟ್ಟಣದ ಸರಹದ್ದಿನಲ್ಲಿ ಯಾವುದೇ ರೀತಿಯ ಚೆಕ್‌ಪೋಸ್ಟ್‌ಗಳು ಇಲ್ಲದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಅಲ್ಲದೆ ಸರ್ಕಾರಕ್ಕೆ ರಾಜಧನ ಸಂದಾಯ ಮಾಡದೆ ವಂಚಿಸಿ ಓವರ್ ಲೋಡ್ ಹೊತ್ತ ಟಿಪ್ಪರ್‌ಗಳ ಓಡಾಟ ಹೆಚ್ಚಿದ್ದು, ಇತ್ತೀಚೆಗೆ ಪಟ್ಟಣದಲ್ಲಿ ನಿರ್ಮಾಣವಾದ ಡಿವೈಡರ್ ರಸ್ತೆ ಸಂಪೂರ್ಣ ಹಾಳಾಗಿದೆ. ಕೂಡಲೇ ಸರ್ಕಾರಕ್ಕೆ ರಾಜಧನ ಸಂದಾಯ ಮಾಡದೆ ಅಕ್ರಮವಾಗಿ ಓಡಾಡುತ್ತಿರುವ ಅನಧಿಕೃತ ಟಿಪ್ಪರ್‌ಗಳ ಪರವಾನಗಿ ರದ್ದುಪಡಿಸಿ ಡಿಎನ್‌ಆರ್ ಕಂಪನಿ ವಿರುಧ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.