ಗಮನ ಸೆಳೆದ ತ್ರಿವರ್ಣ ಧ್ವಜದೊಂದಿಗೆ ನಡಿಗೆ

IMG_20250815_203459_764.jpg
Published on

ಹುಬ್ಬಳ್ಳಿ: ಇಲ್ಲಿಯ ಹಿರೇಪೇಟ ಶ್ರೀ ಗಣೇಶ ಉತ್ಸವ ಮಂಡಳಿ, ಉದಯ ಭಾರತ ಯುವಕ ಮಂಡಳ ಆಶ್ರಯದಲ್ಲಿ ನಗರದಲ್ಲಿ ಏರ್ಪಡಿಸಿದ್ದ 2 ಸಾವಿರ ಅಡಿ ತ್ರಿವರ್ಣ ಧ್ವಜದೊಂದಿಗೆ ದೇಶಕ್ಕಾಗಿ ನಡಿಗೆ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು.

79ನೇ ಸ್ವಾತಂತ್ರ್ಯೋತ್ಸವ ನಿಮಿತ್ತ 2 ಸಾವಿರ ಅಡಿ ಉದ್ದ ಹಾಗೂ 10 ಅಡಿ ಅಗಲದ ತ್ರಿವರ್ಣ ಧ್ವಜದೊಂದಿಗೆ ಭವ್ಯ ನಡಿಗೆಗೆ ಶುಕ್ರವಾರ ಮೂರುಸಾವಿರ ಮಠದ ಗಂಗಾಧರ ಹೈಸ್ಕೂಲ್ ಮೈದಾನದಲ್ಲಿ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು.

ದಾಜಿಬಾನ ಪೇಟ, ಸಂಗೊಳ್ಳಿ ರಾಯಣ್ಣ ವೃತ್ತ, ಮಿನಿವಿಧಾನಸೌಧ, ಸಿದ್ದಪ್ಪ ಕಂಬಳಿ ವೃತ್ತ, ಕೊಪ್ಪಿಕರ ರಸ್ತೆ, ಬ್ರಾಡವೇ, ದುರ್ಗದಬೈಲ್, ಬೆಳಗಾಂವ ಗಲ್ಲಿ, ಜವಳಿ ಸಾಲ, ಬಸಪ್ಪ ಶೆಟ್ಟರ ವೃತ್ತದ ಮೂಲಕ ಹಿರೇಪೇಟ, ಕಂಚಗಾರ ಗಲ್ಲಿ, ಕಾಳಮ್ಮನ ಅಗಸಿ, ಮಹಾವೀರ ಗಲ್ಲಿ ಮುಖಾಂತರ ಸಾಗಿದ ನಡಿಗೆ ಮರಳಿ ಮೂರುಸಾವಿರಮಠದ ಮೈದಾನ ತಲುಪಿತು.

ಯುವ ಪೀಳಿಗೆಯಲ್ಲಿ ದೇಶಾಭಿಮಾನ ಬೆಳೆಸುವುದರ ಜೊತೆಗೆ ನಮ್ಮ ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸುವ ಸಲುವಾಗಿ ಆಯೋಜಿಸಿದ್ದ ಸಮಾರಂಭಕ್ಕೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನವರನ್ನು ಆಹ್ವಾನಿಸಲಾಗಿತ್ತು ಎಂದು ಸಂಘಟಕರ ಪೈಕಿ ಮಲ್ಲಿಕಾರ್ಜುನ ಶಿರಗುಪ್ಪಿ ತಿಳಿಸಿದ್ದಾರೆ.

ಉಪಮೇಯರ್ ಸಂತೋಷ ಚವ್ಹಾಣ, ಮಲ್ಲಿಕಾರ್ಜುನ ಸಾವಕಾರ, ಆಯೋಜಕರಾದ ಗೋಪಾಲಕೃಷ್ಣ ಸವಣೂರ, ಚಂದ್ರಶೇಖರ ಗೋಕಾಕ, ಶಂಭು ಲಕ್ಷ್ಮೇಶ್ವರಮಠ, ಸಾವಿರಾರು ಜನರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net