ಮಾಲು ಸಮೇತ ಇಬ್ಬರು ಕಳ್ಳರ ಬಂಧನ

Published on

ಚಿಂತಾಮಣಿ: ಗ್ರಾಮಾಂತರ ಠಾಣೆ, ಶಿಡ್ಲಘಟ್ಟ ಮತ್ತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಸೇರಿ ವಿವಿಧ ಕಡೆಗಳಲ್ಲಿ ದೇವಸ್ಥಾನಗಳ ಹುಂಡಿ, ಆಭರಣ, ಬೋರ್​ವೆಲ್​ ಕೇಬಲ್​, ಬೈಕ್​ಗಳ ಕದ್ದು ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.ಕೆಂದನಹಳ್ಳಿಯ ಶ್ರೀನಿವಾಸ್​, ಶಬ್ಬಿರ್​ ಪಾಷಾ ಬಂಧಿತರರು.ತಾಲೂಕಿನ ಕಳ್ಳತನ ಪ್ರಕರಣಗಳನ್ನು ಬೇಧಿಸಲು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಲ್​ ಚೌಕ್ಸೆ ಮಾರ್ಗದರ್ಶನದಲ್ಲಿ ಚಿಂತಾಮಣಿ ಉಪ ವಿಭಾಗದ ಪೊಲೀಸ್​ ಅಧೀಕ್ಷಕ ಪಿ.ಮುರಳೀಧರ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್​ ಇನ್​ಸ್ಪೆಕ್ಟರ್​ ಶಿವರಾಜ್​, ಪಿಎಸ್​ಐ ಮಮತಾ, ನಾಗೇಂದ್ರ ಕುಮಾರ್​, ನಾರಾಯಣಸ್ವಾಮಿ, ಎಎಸ್​ಐ ದಿನೇಶ್​, ಪೊಲೀಸ್​ ಸಿಬ್ಬಂದಿ ಒಳಗೊಂಡ ತಂಡ ಕೋಲಾರ ರಸ್ತೆಯ ಆಂಜನೇಯಸ್ವಾಮಿ ದೇವಾಲಯದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net