

ನಿಪ್ಪಾಣಿ: ಹಲವೆಡೆ ನಡೆದ ಕಳ್ಳತನದ ಪ್ರಕರಣ ಭೇದಿಸಿ ಇಬ್ಬರನ್ನು ವಶಪಡಿಸಿಕೊಂಡ ಸ್ಥಳೀಯ ಪೊಲೀಸರು 11.47 ಲಕ್ಷ ರೂ. ವೌಲ್ಯದ 208.5 ಗ್ರಾಂ ಚಿನ್ನಾಭರಣ, 53.2 ಸಾವಿರ ರೂ. ವೌಲ್ಯದ 760 ಗ್ರಾಂ ಬೆಳ್ಳಿಯ ಆಭರಣ ಮತ್ತು 50 ಸಾವಿರ ರೂ. ವೌಲ್ಯದ ಬೈಕ್ ಸೇರಿ ಒಟ್ಟು 12.50 ಲಕ್ಷ ರೂ. ಹಣ ಮತ್ತು ಚಿನ್ನಾಭರಣವನ್ನು ಬುಧವಾರ ವಶಪಡಿಸಿಕೊಂಡಿದ್ದಾರೆ.
ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ ಗ್ರಾಮದ ಆದಿತ್ಯ ಪ್ರದೀಪ ಶ್ರೀಪನ್ನವರ (28), ಅಕ್ಷಯ ಶಂಕರ ನಾರೆ (27) ಬಂತರು. ಕೆಲ ದಿನಗಳ ಹಿಂದೆ ಸ್ಥಳೀಯ ಸಾಯಿಶಂಕರನಗರ, ಚಿಕ್ಕೋಡಿ ತಾಲೂಕಿನ ನವಲಿಹಾಳ ಮತ್ತು ಪಟ್ಟಣಕುಡಿ ಗ್ರಾಮಗಳಲ್ಲಿ ಕಳ್ಳತನದ ಪ್ರಕರಣ ನಡೆದಿದ್ದವು.
ಎಸ್ಪಿ ಡಾ. ಸಂಜೀವ ಪಾಟೀಲ, ಹೆಚ್ಚುವರಿ ಎಸ್.ಪಿ. ಎಂ. ವೇಣುಗೋಪಾಲ, ಚಿಕ್ಕೋಡಿ ಡಿವೆಎಸ್ಪಿ ಜಿ.ಬಿ. ಗೌಡರ ಮಾರ್ಗದರ್ಶನದಲ್ಲಿ ಸ್ಥಳೀಯ ಆರಕ್ಷಕ ವೃತ್ತ ನಿರೀಕ್ಷಕ ಬಿ.ಎಸ್. ತಳವಾರ ನೇತತ್ವದಲ್ಲಿ ಪಿಎಸ್‌ಐ ಅನೀಲ ಕುಂಬಾರ, ಅನೀತಾ ರಾಠೋಡ, ರಮೇಶ ಪವಾರ, ಡಿ.ಬಿ. ಕೋತವಾಲ, ಎಎಸ್‌ಐ ಎನ್.ಎಚ್. ಪೂಜೇರಿ, ಎ.ಜಿ. ತಹಸೀಲ್ದಾರ್, ಸಿಬ್ಬಂದಿ ಎಸ್.ಪಿ. ಅಸೋದೆ, ಜಿ.ಪಿ. ಬಡಿಗೇರ, ಎಸ್.ಎಲ್. ಗಳತಗಿ, ಜಿ.ಎನ್. ನಾಯಿಕ, ಡಿ.ಆರ್. ಪೂಜೇರಿ, ಎಂ.ಎ. ತೇರದಾಳ, ಎಂ.ಎಫ್. ನದಾಫ್, ಎ.ವಿ. ಚಂದನಶಿವ, ಆರ್.ವೈ. ಮೇಲ್ಗಡೆ, ಆರ್.ಬಿ. ಪಾಟೀಲ, ಎಂ.ಬಿ. ಕಾಂಬಳೆ, ವಿ.ಎಂ. ಸಂಭಾಜಿ, ಬಿ.ಕೆ. ತಳವಾರ ತಂಡ ಕಾರ್ಯಾಚರಣೆ ನಡೆಸಿತು.