ಇಬ್ಬರು ಸರಗಳ್ಳರ ಬಂಧನ

chain theft
Published on

ಕೋಲಾರ: ನಗರದ ಬ್ರಾಹ್ಮಣರ ಬೀದಿಯಲ್ಲಿ ಎರಡು ದಿನದ ಹಿಂದೆ ಮನೆ ಹೊರಗಿದ್ದ ಲಕ್ಷ್ಮಿಕಾಂತಮ್ಮ ಎಂಬುವವರ ಸರ ಕದ್ದು ಪರಾರಿಯಾಗಿದ್ದ ಇಬ್ಬರನ್ನು ನಗರಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ನಗರದ ವೀರಾಂಜನೇಯ ನಗರದ ಹರೀಶ್​ ಮತ್ತು ವಾಸು ಬಂಧಿತರು. ಗುರುವಾರ ಲಕ್ಷ್ಮಿಕಾಂತಮ್ಮ ಮನೆಯ ಹೊರಗೆ ಓಡಾಡುತ್ತಿದ್ದಾಗ ಬೈಕ್​ನಲ್ಲಿ ಬಂದಿದ್ದ ಸರಗಳ್ಳರು 60ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ್ದ ಪೊಲೀಸರು ಬ್ರಾಹ್ಮಣರ ಬೀದಿಯ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ನಂತರ ವೃತ್ತ ನಿರೀಕ್ಷಕ ರಾಘವೇಂದ್ರ ಪ್ರಕಾಶ್​ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದಾಗ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಬಂಧಿತರಿಂದ ಸರ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net