ಇಬ್ಬರು ಕಳವು ಆರೋಪಿಗಳು ಅಂದರ್

14JAGGU5
ಉದ್ಯಮಬಾಗ ಠಾಣೆ ಪೊಲೀಸರು ಚಿನ್ನಾಭರಣ ವಶಪಡಿಸಿಕೊಂಡಿರುವುದು.
Published on

ಬೆಳಗಾವಿ: ಮನೆಗಳ್ಳತನ, ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರ ಪೊಲೀಸರ ತಂಡವು ಮನೆಗಳ್ಳತನ ಆರೋಪಿ ಮಹಾರಾಷ್ಟ್ರದ ರಫೀಕ್ ಮಹಮ್ಮದ ಶೇಖ್ ಹಾಗೂ ಸರಗಳ್ಳತನದ ಆರೋಪಿ ಬೆಳಗಾವಿ ತಾಲೂಕಿನ ದಾಮನೆ ಗ್ರಾಮದ ಪ್ರಜ್ವಲ್ ಖಾನಜೆ ಎಂಬುವರನ್ನು ಉದ್ಯಮಬಾಗ ಪೊಲೀಸ್ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಒಟ್ಟು 5 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳಿಂದ 10,76,900 ರೂ. ಮೌಲ್ಯದ 148 ಗ್ರಾಂ ಚಿನ್ನಾಭರಣ ಹಾಗೂ 3,800 ರೂ. ಮೌಲ್ಯದ 40 ಗ್ರಾಂ ಬೆಳ್ಳಿ ಆಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಉದ್ಯಮಬಾಗ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಕೆ.ಪಾಟೀಲ, ಪಿಎಸ್‌ಐಗಳಾದ ಕಿರಣ ಹೊನಕಟ್ಟಿ, ಆರ್.ಪಿ.ಕದಮ, ಸಿಎಚ್‌ಸಿ ಟಿ.ಬಿ. ಕುಂಚನೂರ, ಸಿಪಿಸಿಗಳಾದ ಭರಮಣ್ಣ ಕರೆಗಾರ, ಜಗದೀಶ ಹಾದಿಮನಿ, ಈರಣ್ಣ ಚವಲಗಿ, ಶಿವಕುಮಾರ ಕರ್ಕಿ, ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ ಅಕ್ಕಿ, ಮಹಾದೇವ ಕಾಶಿದ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net