ವಿಷ ಕುಡಿದು ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆ

Crime Logo
Published on

ನಾಪೋಕ್ಲು: ಇಲ್ಲಿಗೆ ಸಮೀಪದ ಬಲಮಾವಟಿ ಗ್ರಾಮದ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ವಿದ್ಯಾರ್ಥಿಗಳು ಗುರುವಾರ ಮೃತಪಟ್ಟಿದ್ದಾರೆ.

ಬಲಮಾವಟ್ಟಿ ಗ್ರಾಮದ ನಿವಾಸಿ ಮಲೆಯಂಡ ಪ್ರಶಾಂತ್ ಅವರ ಪುತ್ರ ಪ್ರತೀಕ್ ಪೊನ್ನಣ್ಣ(17) ಹಾಗೂ ನೆಲಜಿ ಗ್ರಾಮದ ನಿವಾಸಿ ಚಟ್ಟಿಯಾರಂಡ ತನು ತಮ್ಮಯ್ಯ ಅವರ ಪುತ್ರಿ ಹರ್ಷಿಣಿ(17) ಮೃತಪಟ್ಟವರು.

ಇವರು ಮೂರ್ನಾಡು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಬಲಮಾವಟ್ಟಿ ಗ್ರಾಮದ ಪ್ರತೀಕ್ ಪೊನ್ನಣ್ಣ ಅವರ ಮನೆಯಲ್ಲಿ ಮಂಗಳವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net