ವೃದ್ಧ ಸೇರಿ ಅಪರಿಚಿತರಿಬ್ಬರು ಸಾವು

tunga-nagar-police-station
ಶಿವಮೊಗ್ಗ ತುಂಗಾನಗರ ಠಾಣೆ
Published on

ಶಿವಮೊಗ್ಗ: ಪ್ರತ್ಯೇಕ ಪ್ರಕರಣಗಳಲ್ಲಿ ರಸ್ತೆ ಬದಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ ವ್ಯಕ್ತಿಗಳಿಬ್ಬರು ಮೃತಪಟ್ಟಿದ್ದಾರೆ.

ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಹತ್ತಿರ ರಸ್ತೆ ಬದಿ 50-55 ವರ್ಷದ ವ್ಯಕ್ತಿ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಗೋವಿಂದಪುರದ ಹಾಯ್‌ಹೊಳೆ ರಸ್ತೆ ಬದಿಯಲ್ಲಿ ಆ.14ರಂದು ಅಸ್ವಸ್ಥಗೊಂಡಿದ್ದ 65 ವರ್ಷದ ವೃದ್ಧನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ದಿದ್ದು ತುಂಗಾನಗರ ಠಾಣೆಯಲ್ಲಿ ಪ್ರಕರಣ ಪ್ರತ್ಯೇಕ ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net