ಲಾರಿ ಹರಿದು ಇಬ್ಬರು ಕುರಿಗಾಹಿ ಸಾವು

Accident
Published on

ಬಳ್ಳಾರಿ: ತಾಲೂಕಿನ ಬೆಂಚಿಕೊಟ್ಟಲ್ ಗ್ರಾಮದ ಜಮೀನಿನಲ್ಲಿ ಲಾರಿ ಹರಿದು ಇಬ್ಬರು ಕುರಿಗಾಹಿಗಳು ಮೃತಪಟ್ಟಿದ್ದಾರೆ.

ಮೊಳಕಾಲ್ಮೂರು ತಾಲೂಕಿನ ಮ್ಯಾಗಳಹಟ್ಟಿ ಗ್ರಾಮದ ಸಿದ್ದಪ್ಪ(21), ಎರ್ರಿಸ್ವಾಮಿ (51) ಮೃತ ರ್ದುದೈವಿ.

ಹೊಲದಲ್ಲಿ ಕಬ್ಬು ಲೋಡ್ ಮಾಡಲು ಶನಿವಾರ ನುಸುಕಿನ ಜಾವ 4.30ಕ್ಕೆ ಲಾರಿ ಬಂದಿತ್ತು. ಸಮೀಪದಲ್ಲೇ ಕುರಿಗಳನ್ನು ನಿಲ್ಲಿಸಿ ಕುರಿಗಾಹಿಗಳು ಮಲಗಿದ್ದರು. ಕಬ್ಬು ತುಂಬಿಕೊಂಡು ಹಿಂಬದಿಯಲ್ಲಿ ಸಾಗುತ್ತಿದ್ದ ಲಾರಿ ಕುರಿಗಾಹಿಗಳ ಮೇಲೆ ಹರಿದಿದೆ.

ಹಾಗಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net