ಇಬ್ಬರಿಗೆ 1 ವರ್ಷ ಜೈಲು ಶಿಕ್ಷೆ

web 66
Published on

ಧಾರವಾಡ: ಕಳ್ಳತನ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ 3ನೇ ಎಸಿಜೆಎಂ ನ್ಯಾಯಾಲಯವು ಇಬ್ಬರಿಗೆ 1 ವರ್ಷ ಜೈಲು ಶಿಕ್ಷೆ ಮತ್ತು ತಲಾ 1 ಸಾವಿರ ರೂಪಾಯಿ ದಂಡ ವಿಧಿಸಿ ಗುರುವಾರ ಆದೇಶಿಸಿದೆ.

ನಗರದ ಲಕ್ಷ್ಮೀಸಿಂಗನಕೇರಿಯ ಸುನೀಲ ಹಣಮಂತಪ್ಪ ಶೀತಿಮನಿ ಮತ್ತು ಮಂಜುನಾಥ ಬಸವರಾಜ ಡಂಬರಿಕೊಪ್ಪ ಜೈಲು ಶಿಕ್ಷೆಗೆ ಗುರಿಯಾದವರು. ಇವರಿಬ್ಬರು ಇಲ್ಲಿನ ಮಾಳಮಡ್ಡಿಯ ಸ್ವಾತಿ ಸ್ಟುಡಿಯೋ ಬೀಗ ಮುರಿದು ಸುಮಾರು 4.22 ಲಕ್ಷ ರೂಪಾಯಿ ಮೌಲ್ಯದ ಕ್ಯಾಮರಾ ಮತ್ತು ಲೆನ್ಸ್ಗಳನ್ನು ಕಳ್ಳತನ ಮಾಡಿದ್ದರು. ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಪಿಎಸ್‌ಐ ಶಿವಪ್ಪ ತೇಗೂರ ಹಾಗೂ ಇನ್‌ಸ್ಪೆಕ್ಟರ್ ಎಂ.ಕೆ. ಬಸಾಪುರ ತನಿಖೆ ನಡೆಸಿ ಕಳವಾಗಿದ್ದ ವಸ್ತುಗಳನ್ನು ಜಪ್ತಿ ಮಾಡಿ ಇಬ್ಬರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

3ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಅಲ್ಲಪ್ಪ ಎಂ. ಬಡಿಗೇರ ಅವರು ವಿಚಾರಣೆ ನಡೆಸಿ ಇಬ್ಬರಿಗೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಹಿರಿಯ ಸಹಾಯಕ ಸರ್ಕಾರಿ ವಕೀಲ ಅನಿಲಕುಮಾರ ಆರ್. ತೊರವಿ ಸರ್ಕಾರದ ಪರ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net