ಎರಡು ಶಾಲೆಗಳು ಶೇ.100 ಸಾಧನೆ

bhr shrihari
ಶ್ರೀಹರಿ
Published on

ಬಾಳೆಹೊನ್ನೂರು: ಸಂಗಮೇಶ್ವರ ಪೇಟೆ ಪೂರ್ಣಪ್ರಜ್ಞಾ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದೊರೆತಿದೆ ಎಂದು ಮುಖ್ಯಶಿಕ್ಷಕ ಜಿ.ಕೆ.ಸುಹಾಸ್ ತಿಳಿಸಿದ್ದಾರೆ.

92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 56 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 36 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಡಿ.ವಿ.ಶ್ರೀಹರಿ 613, ಶಿಶಿರ್ ಸಿ.ಕೊಠಾರಿ 607, ಎಚ್.ಆರ್.ಧ್ವನಿ 605, ಎಚ್.ಸಿ.ಅಭಿಷೇಕ್ 602, ಡಿ.ಆರ್.ಧನುಷ್ 600 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದ್ದಾರೆ. ಕಡಬಗೆರೆ ಜ್ಯೋತಿರ್ ವಿಕಾಸ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಬೀಬಿ ಜೈನಬ್ 606, ಜಿ.ಎಸ್.ಬಾಂಧವ್ಯ 602, ಎಂ.ಕೆ.ಕಾವ್ಯಶ್ರೀ 584 ಅಂಕ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net