ಬಾರ್​​​ನಲ್ಲಿ ಮಚ್ಚು ಹಿಡಿದು ಪುಂಡಾಟ ನಡೆಸಿದ್ದ ಪುಡಿ ರೌಡಿಗಳ ಬಂಧನ

bar pic
Published on

ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಪುಡಿ ರೌಡಿಗಳ ಉಪಟಳ ಹೆಚ್ಚಾಗುತ್ತಿದ್ದು, ಕೆಲ ದಿನಗಳ ಹಿಂದೆ ಬಾರ್​ ವೊಂದಕ್ಕೆ ನುಗ್ಗಿ ಮಚ್ಚು ಹಿಡಿದು ಪುಂಡಾಟ ನಡೆಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರಿಂದ ಇಬ್ಬರು ಆರೋಪಿಗಳಾದ ತೇಜಸ್ ಹಾಗೂ ತೇಜಸ್ ಬಂಧನವಾಗಿದೆ. ಕೆಲ ದಿನಗಳ ಹಿಂದೆ ಇಟ್ಟಮಡುವು ಬಳಿಯ ಎಸ್.ಎಲ್.ವಿ ಬಾರ್ ನಲ್ಲಿ ಮಾರಕಾಸ್ತ್ರ ಹಿಡಿದು ಬಾರ್ ಗೆ ನುಗ್ಗಿದ್ದ ಪುಡಿ ರೌಡಿಗಳು. ಪಕ್ಕದ ಬಾರ್ ಒಂದರಲ್ಲಿಯೂ ಗ್ಲಾಸ್ ಗಳನ್ನ ಒಡೆದು ಹಾಕಿ ಪರಾರಿಯಾಗಿದ್ದರು.

ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net