ಡಿವೈಡರ್​ಗೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರಿಗೆ ಗಂಭೀರ ಗಾಯ

Bike Accident_2
Published on

ಅಂಕೋಲಾ: ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಮತ್ತು ದೀಪದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಪಟ್ಟಣದ ಕಾರವಾರ ರಸ್ತೆ ವಾಜಂತ್ರಿ ಕಟ್ಟೆ ಸಮೀಪ ಮಂಗಳವಾರ ಸಂಜೆ ನಡೆದಿದೆ. ತಾಲೂಕಿನ ಹಿಲ್ಲೂರಿನ ಹೊಸಕಂಬಿ ಗ್ರಾಮದ ವಿಶ್ವನಾಥ ಹನುಮಂತ ಆಗೇರ ಮತ್ತು ಕುಮಟಾ ತಾಲೂಕಿನ ಬಂಕಿಕೊಡ್ಲದ ವಿಕಾಸ ಹೊನ್ನ ಆಗೇರ ಗಾಯಗೊಂಡಿದ್ದಾರೆ. ಬೈಕ್ ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದ ತೀವ್ರತೆಗೆ ಬೈಕ್​ನ ಮುಂಭಾಗ ಜಖಂಗೊಂಡಿದ್ದು, ಬೈಕ್ ಸವಾರರ ತಲೆ ಮತ್ತು ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಸ್ಥಳೀಯರ ಸಹಕಾರದಿಂದ ಇವರನ್ನು ತಾಲೂಕಾಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಪಿಎಸ್​ಐ ಸುನೀಲ ಹುಲ್ಲೊಳ್ಳಿ ಸ್ಥಳ ಪರಿಶೀಲಿಸಿ, ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net