

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ 2021- 22ನೇ ಸಾಲಿನ ಬಿ.ಕಾಂ ಕಾರ್ಪೋರೇಟ್ ಸೆಕ್ರೆಟರಿಶಿಪ್ ಕೋರ್ಸ್ನ ಫಲಿತಾಂಶ ಪ್ರಕಟವಾಗಿದೆ. ನಗರದ ಡಾ. ಡಿ.ಜಿ. ಶೆಟ್ಟಿ ಎಜುಕೇಶನಲ್ ಸೊಸೈಟಿಯ ಆರ್.ಎಸ್. ಶೆಟ್ಟಿ ಕಾಲೇಜ್ ಆಫ್ ಕಾಮರ್ಸ್ನ ಜಯಶ್ರೀ ನೆವನಗದ್ದೆ ಹಾಗೂ ಶಾಹೀನಬಾನು ಉಡುಪಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕ್ರಮವಾಗಿ ಪ್ರಥಮ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಡಾ. ಡಿ.ಜಿ. ಶೆಟ್ಟಿ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.