ಏಟಿಗೊಂದು ಸಾವು!; ಕಾಳಗದಲ್ಲಿ ಎರಡು ಟಗರುಗಳ ಮರಣ..

Ram
Published on

ವಿಜಯಪುರ: 'ಒಂದೇ ಏಟು, ತಕ್ಷಣ ಸಾವು..' ಇದು ಟಗರು ಕಾಳಗವೊಂದರಲ್ಲಿ ಕಾಣಿಸಿಕೊಂಡ ಎರಡು ದೃಶ್ಯಗಳು. ಕಾಳಗವೊಂದರಲ್ಲಿ ಎರಡು ಟಗರುಗಳು ಒಂದೇ ಏಟಿಗೆ ಸಾವಿಗೀಡಾದ ಪ್ರಸಂಗವೊಂದು ನಡೆದಿದೆ.

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಜಾತ್ರೆಯಲ್ಲಿ ಎರಡು ದಿನಗಳ ಹಿಂದೆ ಈ ಟಗರು ಕಾಳಗ ನಡೆದಿತ್ತು. ಅಲ್ಲಿ ಸಂಭವಿಸಿದ್ದ ಈ ಎರಡು ಸಾವುಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಗರು ಸಾವಿಗೀಡಾದ ಕಾರಣ ಅದರ ಮಾಲೀಕರು ನಷ್ಟಕ್ಕೊಳಗಾಗಿ ಚಿಂತೆಗೀಡಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೆನ್ನಿಕಟ್ಟಿ ಗ್ರಾಮದ ಟಗರು ಗುದ್ದಿದ ಪರಿಣಾಮ ಎರಡು ಟಗರುಗಳು ಸಾವಿಗೀಡಾಗಿವೆ. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯ ಹಾಗೂ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಟಗರುಗಳು ಮೃತಪಟ್ಟಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net