ಬಲೆಯಲ್ಲಿ ಸಿಲುಕಿದ್ದ ಎರಡು ಹೆಬ್ಬಾವು ರಕ್ಷಣೆ

Two pythons trapped in a trap rescued
Published on

ಭಟ್ಕಳ: ಪುರವರ್ಗ ಹೊರವಲಯದ ದುರ್ಗಾನಾಯ್ಕರ ಗದ್ದೆಯಲ್ಲಿ ಇಟ್ಟಿದ್ದ ಬಲೆಯಲ್ಲಿ ಬೃಹತ್ ಗಾತ್ರದ ಎರಡು ಹೆಬ್ಬಾವುಗಳು ಸಿಕ್ಕಿ ಬಿದ್ದ ಘಟನೆ ಮಂಗಳವಾರ ನಡೆದಿದೆ.

ಸುಮಾರು 8 ರಿಂದ 10 ಅಡಿ ಉದ್ದ ಹಾಗೂ 40-45 ಕೆ.ಜಿ. ತೂಕದ ಹೆಬ್ಬಾವುಗಳನ್ನು ಕಂಡ ಮನೆಯವರು ಹಾಗೂ ಅಕ್ಕಪಕ್ಕದವರು ಬೆಚ್ಚಿಬಿದ್ದರು. ತಕ್ಷಣ ಜಮೀನ ಮಾಲೀಕರು ಉರಗಪ್ರೇಮಿ ಲೋಕೇಶ್ ನಾಯ್ಕರಿಗೆ ಮಾಹಿತಿ ನೀಡಿದರು.

ಲೋಕೇಶ್ ನಾಯ್ಕ ಅವರೊಂದಿಗೆ ಮಂಜುನಾಥ ನಾಯ್ಕ ಹಾಗೂ ಜಗದೀಶ ನಾಯ್ಕ ಸ್ಥಳಕ್ಕೆ ಬಂದು ಎಚ್ಚರಿಕೆಯಿಂದ ಬಲೆಯಿಂದ ಹಾವನ್ನು ಬಿಡಿಸಿದರು. ಹಾವಿಗೆ ಯಾವುದೇ ಗಾಯವಾಗಿಲ್ಲವೆಂದು ಖಚಿತಪಡಿಸಿಕೊಂಡ ಬಳಿಕ, ಅರಣ್ಯ ಇಲಾಖೆಯ ಸಿಬ್ಬಂದಿ ಸಮ್ಮುಖದಲ್ಲಿ ಅವುಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net