ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಎರಡು ಪ್ರತಿಷ್ಠಿತ ಪ್ರಶಸ್ತಿ ಲಭ್ಯ

bmtc
Published on

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಸ್ಮಾರ್ಟ್ ಆಟೋಮೋಟಿವ್ ಸಮ್ಮಿಟ್ ಎಕ್ಸಲೆನ್ಸ್ ಅವಾರ್ಡ್ಸ್ 2024 ರಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಬುಧವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಮತ್ತು ನವೀನ ವಲಯಗಳಲ್ಲಿನ ಅತ್ಯುತ್ತಮ ಸಾಧನೆಗಾಗಿ ಬಿಎಂಟಿಸಿಗೆ ಈ ಪ್ರಶಸ್ತಿಗಳು ಸಂದಿವೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕಿಯೋಸ್ಕ್ ಯಂತ್ರವನ್ನು ಸ್ಥಾಪಿಸಿದ್ದು, ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಬಸ್ ವೇಳಾಪಟ್ಟಿ, ಮಾರ್ಗಗಳು ಮತ್ತು ಇತರ ಸಾರಿಗೆ ಸಂಬಂಧಿತ ಸೇವೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಹಾಗೂ ದೇಶದಲ್ಲೇ ಮೊದಲ ಬಾರಿಗೆ ಮಹಿಳೆಯರ ಸುರಕ್ಷತೆಗಾಗಿ ಜಿಪಿಎಸ್ ಆಧಾರಿತ ಪ್ಯಾನಿಕ ಬಟನ್ ಅಳವಡಿಸಿರುವ ಸಂಸ್ಥೆಯ ಅತ್ಯಾಧುನಿಕ ತಂತ್ರಜ್ಞಾನಕ್ಕಾಗಿ ಪ್ರಶಸ್ತಿಗಳು ಬಂದಿವೆ.

ಬಿಎಂಟಿಸಿ ನಿರ್ದೇಶಕ (ಭದ್ರತೆ) ಅಬ್ದುಲ್ ಅಹ್ಮದ್, ಮುಖ್ಯ ಗಣಕ ವ್ಯವಸ್ಥಾಪಕ ಕೆ.ಜಿ.ಸದಾನಂದ, ಮತ್ತು ಪಿಆರ್‌ಓ ಸುನೀತಾ ಜೆ.ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net