ಇಲ್ಲಿ ಪೊಲೀಸರೇ ಕಳ್ಳರು!: ಕಳ್ಳಸಾಗಣೆದಾರರಿಂದಲೇ ರಕ್ತಚಂದನ ದೋಚುತ್ತಿದ್ದ ಪೊಲೀಸರಿಬ್ಬರ ಬಂಧನ

Police
Published on

ಬೆಂಗಳೂರು: ಒಂದೇ ಮಾತಿನಲ್ಲಿ ಹೇಳುವುದಾದರೆ ಇವರಿಬ್ಬರು ಕಳ್ಳಪೊಲೀಸರು. ಅಂದರೆ ಪೊಲೀಸರಾಗಿದ್ದರೂ ಕಳ್ಳತನಕ್ಕೆ ಇಳಿದು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಇಬ್ಬರು ಕಳ್ಳಪೊಲೀಸರನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ಹೆಡ್ ಕಾನ್​ಸ್ಟೆಬಲ್ ಮೋಹನ್, ಮಹದೇವಪುರ ಠಾಣೆಯ ಹೆಡ್​ ಕಾನ್​ಸ್ಟೆಬಲ್​ ಮಮ್ತೇಶ್ ಗೌಡ ಬಂಧಿತ ಪೊಲೀಸರು. ಇವರಿಬ್ಬರನ್ನು ಬಂಧಿಸಿರುವ ಹೊಸಕೋಟೆ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ಇವರು ಕಳ್ಳಸಾಗಣೆ ಮಾಡುತ್ತಿದ್ದವರನ್ನು ತಡೆದು ಪೊಲೀಸರು ಎಂದು ಬೆದರಿಸಿ ಅವರಲ್ಲಿದ್ದ ರಕ್ತಚಂದನವನ್ನು ದೋಚುತ್ತಿದ್ದರು. ಹೀಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಕಳೆದ ಡಿ. 15ರಂದು ಟಾಟಾ ಏಸ್​ವೊಂದನ್ನು ತಡೆದು ಸ್ಮಗ್ಲರ್ಸ್​ಗೆ ಬೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ರಕ್ತಚಂದನವನ್ನು ದೋಚಿದ್ದ ಇವರು ಈಗ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net