

ಮುಂಡಗೋಡ: ಪಟ್ಟಣದ ಎಪಿಎಂಸಿ ಬಳಿ ಇಸ್ಪೀಟ್ ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದಾಗ ಇಬ್ಬರು ಸಿಕ್ಕಿಬಿದ್ದಿದ್ದು, ಎಂಟು ಜನ ಪರಾರಿಯಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಪಟ್ಟಣದ ರಾಘವೇಂದ್ರ ರಾಮಚಂದ್ರ ರಾಯ್ಕರ, ನಿಸ್ಸಾರಾಹ್ಮದ್ ಮದರಸಾಬ ದರ್ಗಾವಾಲೆ ಎಂಬುವವರನ್ನು ಬಂಧಿಸಲಾಗಿದೆ. ಲಾಲಸಾಬ ಇಟ್ಟಂಗಿ, ನಾಶೀರ ಬಂಕಾಪುರ, ರಫೀಕ ಭಟ್ಕಳ, ಅಲ್ಲಾಭಕ್ಷ ಹಿರೇಹಳ್ಳಿ, ಅಕ್ಬರಶಾ ಮೀರಾಶಿ, ಮೌಲಾಲಿ ಜಂಡೆವಾಲೆ, ಸೈಯದ್ ಹುಸೇನ್ ಯಳ್ಳೂರ, ಇಸ್ಮಾಯಿಲ್ ಹಾನಗಲ್ ಪರಾರಿಯಾಗಿದ್ಧಾರೆ. ದಾಳಿ ವೇಳೆ 11,500ರೂ. ನಗದು, ಆಟಕ್ಕೆ ಬಳಸಿದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಪಿಐ ರಂಗನಾಥ ನೀಲಮ್ಮನವರ ಮಾರ್ಗದರ್ಶನದಲ್ಲಿ ಕ್ರೈಂ ಪಿಎಸ್‌ಐ ಹನಮಂತ ಗುಡಗುಂಟಿ ನೇತೃತ್ವದಲ್ಲಿ ಸಿಬ್ಬಂದಿ ಮಾಂತೇಶ ಮುಧೋಳ, ಸಂಜು ರಾಠೋಡ, ಕೆಂಚಪ್ಪ ಜಾಲಿಕಟ್ಟಿ, ಬಸವರಾಜ ಒಡೆಯರ, ಅನ್ವರ ಬಮ್ಮಿಗಟ್ಟಿ, ಶಿವಾನಂದ ದಾನಮ್ಮನವರ ದಾಳಿಯಲ್ಲಿ ಭಾಗವಹಿಸಿದ್ದರು.