ಶೃಂಗೇರಿ ಕ್ಷೇತ್ರದ ಇಬ್ಬರಿಗೆ ಸಿಗಲಿದೆ ಪ್ರಮುಖ ಹುದ್ದೆ

nrp mla build
ಎನ್.ಆರ್.ಪುರ ಸೌತಿಕೆರೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು. ಡಾ. ಕೆ.ಪಿ.ಅಂಶುಮಂತ್, ಶೈಲಾ, ಸುನೀಲ್‌ಕುಮಾರ್, ಚಂದ್ರಶೇಖರ್, ಅಶ್ವಿನಿ, ಲಿಲ್ಲಿ, ಯಾಸ್ಮೀನ್, ಇ.ಸಿ.ಜೋಯಿ ಇತರರಿದ್ದರು.
Published on

ಎನ್.ಆರ್.ಪುರ: ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಅವರಿಗೆ ಮುಂದಿನ ದಿನಗಳಲ್ಲಿ ಪ್ರಮುಖ ಹುದ್ದೆಗಳು ಸಿಗಲಿವೆ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಸೌತಿಕೆರೆಯಲ್ಲಿ 5.7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಾಂಕೇತಿಕವಾಗಿ ಉದ್ಘಾಟನೆ ಮಾಡಿರುವ ಈ ಕಟ್ಟಡವನ್ನು ಮಾರ್ಚ್‌ನಲ್ಲಿ ಸಚಿವರು, ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಉದ್ಘಾಟಿಸಲಾಗುವುದು. ವಿದ್ಯಾರ್ಥಿ ನಿಲಯಕ್ಕೆ ಕಾಟ್, ಬೆಡ್, ಡೆಸ್ಕ್ ಸೇರಿದಂತೆ ಇನ್ನೂ ಅನೇಕ ಮೂಲಭೂತ ಸೌಲಭ್ಯ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಪಟ್ಟಣದ ಕೆಪಿಎಸ್‌ಗೆ ಕಟ್ಟಡ, ಕಿತ್ತೂರು ರಾಣಿ ಚನ್ನಮ್ಮ ವಸತಿಗೆ ಶಾಲೆ ಕಟ್ಟಡ ನಿರ್ಮಿಸಬೇಕಿದೆ. ಮಕ್ಕಳ ಹಿತದೃಷ್ಟಿಯಿಂದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯನ್ನು ಈ ವಾರಾಂತ್ಯದಲ್ಲಿ ಇದೇ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್, ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ಚಂದ್ರಶೇಖರ್, ಅಶ್ವಿನಿ, ಲಿಲ್ಲಿ, ಯಾಸ್ಮೀನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಇ.ಸಿ.ಜೋಯಿ, ಎಸ್.ಡಿ.ರಾಜೇಂದ್ರ, ಮುಕುಂದ, ಬಿ.ಎಸ್.ಸುಬ್ರಹ್ಮಣ್ಯ, ಅಜ್ಜಪ್ಪ, ಉಪೇಂದ್ರ, ಬೆನ್ನಿ, ಮಾಳೂರು ದಿಣ್ಣೆ ರಮೇಶ್, ಏಲಿಯಾಸ್, ಜನಾರ್ದನ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net