ಕಾರಿನಲ್ಲಿ ಗೋವಾ ಮದ್ಯ ಸಾಗಿಸುತ್ತಿದ್ದ ಆಂಧ್ರದ ಇಬ್ಬರು ಅರೆಸ್ಟ್

27 jyd 01
Published on

ಜೊಯಿಡಾ: ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ ಘಟನೆ ಬುಧವಾರ ನಡೆದಿದೆ.

ಆಂಧ್ರಪ್ರದೇಶದ ಅನ್ವರ್ ಭಾಷಾ ಹಾಗೂ ಉಪ್ಪಲೂರು ನಾಗೇಶ್ವರಾವ್ ರೆಡ್ಡಿ ಬಂಧಿತರು.

ತಾಲೂಕಿನ ಅನಮೋಡ ಗ್ರಾಮದ ಅಬಕಾರಿ ತನಿಖಾ ಠಾಣೆಯಲ್ಲಿ ವಾಹನ ತಪಾಸಣೆ ವೇಳೆ ಕಾರಿನಲ್ಲಿ ವಿವಿಧ ಬ್ರ್ಯಾಂಡ್​ನ 66 ಲೀಟರ್ ಗೋವಾ ಮದ್ಯ ಸಾಗಿಸುತ್ತಿದ್ದ ವೇಳೆ ಅವರನ್ನು ಕಾರಿನ ಸಮೇತ ಬಂಧಿಸಲಾಗಿದೆ.

ಅಬಕಾರಿ ಆಯುಕ್ತೆ ವನಜಾಕ್ಷಿ ಎಂ ಮತ್ತು ಉಪ ಅಧೀಕ್ಷಕರಾದ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕ ಟಿ. ಬಿ. ಮಲ್ಲಣವರ, ಸಿಬ್ಬಂದಿ ಯು.ಎನ್. ತುಳಜಿ , ಆರ್.ಎನ್. ನಾಯ್ಕ, ಬಾಲಕೃಷ್ಣ ಕುಪ್ಪುಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net