

ಮಂಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ರಿಕ್ಷಾ ಚಾಲಕರು ಮೃತಪಟ್ಟ ಘಟನೆ ಮಂಗಳೂರಿನ ರೋಸಾರಿಯೋ ಸಮೀಪ ನಡೆದಿದೆ.
ನಗರದ ರೋಸಾರಿಯೋ ಶಾಲೆಯ ಹಿಂಭಾಗದಲ್ಲಿ ರಿಕ್ಷಾ ಚಾಲಕರೊಬ್ಬರು ಆಟೋ ತೊಳಿಯುತ್ತಿರುವ ಸಮಯದಲ್ಲಿನೆಲಕ್ಕೆ ಬಿದಿದ್ದ ವಿದ್ಯುತ್ ತಂತಿಯೊಂದು ಆಕಸ್ಮಿಕವಾಗಿ ತುಳಿದ ಪರಿಣಾಮ ರಾಜು ಎಂಬವರಿಗೆ ವಿದ್ಯುತ್ ಶಾಕ್ ಆಗಿತ್ತು, ಈ ವೇಳೆ
ಅದನ್ನು ಕಂಡು ಮತ್ತೊಬ್ಬ ರಿಕ್ಷಾ ಚಾಲಕರು ದೇವರಾಜು ಅವರು ರಾಜು ಅವರ ಪ್ರಾಣ ಉಳಿಸಲು ಹೋಗಿ ತಮ್ಮ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ.
ಮೃತಪಟ್ಟ ರಾಜು ಮತ್ತು ದೇವರಾಜು ಇಬ್ಬರೂ ಆಟೋ ಚಾಲಕ ರಾಗಿದ್ದು, ಒಬ್ಬರು ಪುತ್ತೂರು ಹಾಗೂ ಇನ್ನೊಬ್ಬರು ಸಕಲೇಶ್ ಪುರ ದವರಾದ್ದಾರೆ. ಇಬ್ಬರೂ ಪಾಂಡೇಶ್ವರದ ರೋಸಾ ರಿಯೋ ಚರ್ಚ್ ಹಿಂಬದಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದಾರೆ. ಇಂದು ಬೆಳಗ್ಗೆ 4.30 ರ ಸುಮಾರಿಗೆ ಒಬ್ಬರು ರಿಕ್ಷಾ ಸ್ವಚ್ಚ ಗೊಳಿಸಲು ಹೊರಬಂದಿದ್ದು, ಈ ವೇಳೆ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯ ಆಘಾತಕ್ಕ ಒಬ್ಬರು ಒಳಗಾಗಿದ್ದಾರೆ. ಇದನ್ನು ಕಂಡು ಇನ್ನೊಬ್ಬರು ಅವರ ರಕ್ಷಣೆ ಗೆ ಬಂದವರು ಅವರೂ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು, ಮೆಸ್ಕಾಂ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಪೊಲೀಸರ ತನಿಖೆ ಪ್ರಗತಿಯಲ್ಲಿದೆ.