ನಿಂತಿದ್ದ ಟ್ರಾೃಕ್ಟರ್‌ಗೆ ಬೈಕ್ ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು

Kamatagi Accident
Published on

ಕಮತಗಿ: ಸಮೀಪದ ರಾಮಥಾಳ ಕ್ರಾಸ್ ಬಳಿ ನಿಂತಿದ್ದ ಟ್ರಾೃಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಸಹೋದರರಾದ ಅಮರೇಶ್ ಬಸಯ್ಯ ಬೆನಕನಾಳಮಠ (21), ಶರಣಯ್ಯ ಬಸಯ್ಯ ಬೆನಕಾಳಮಠ (13) ಮೃತ ದುರ್ದೈವಿಗಳು.

ಶರಣಯ್ಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿರುವ ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ 7ನೇ ತರಗತಿ ಅಧ್ಯಯನ ಮಾಡುತ್ತಿದ್ದ. ಆತನನ್ನು ಗಣೇಶ ಹಬ್ಬಕ್ಕೆಂದು ಊರಿಗೆ ಕರೆದುಕೊಂಡು ಇಳಕಲ್ ಕಡೆಗೆ ಬೈಕ್‌ನಲ್ಲಿ ಹೊರಟಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಮಕ್ಕಳ ತಾಯಿ ಇತ್ತೀಚೆಗೆ ಹೆರಿಗೆ ಸಂದರ್ಭದಲ್ಲಿ ಮೃತಪಟ್ಟಿದ್ದರು.

ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಹುನಗುಂದ ಸಿಪಿಐ ಸುನೀಲ ಸವದಿ ಭೇಟಿ ನೀಡಿದ್ದಾರೆ. ಅಮೀನಗಡ ಪಿಎಸ್‌ಐ ಜೆ.ವೈ. ವಾಲಿಕಾರ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net