ಅಪಘಾತದಲ್ಲಿ ಇಬ್ಬರ ಸಾವು

accident
Published on

ಮುಂಡಗೋಡ: ಬೈಕ್ ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿ ಹಾನಗಲ್ಲ ತಾಲೂಕಿನ ಇಬ್ಬರು ಮೃತಪಟ್ಟ ಘಟನೆ ಶಿಂಗ್ನಳ್ಳಿ ಜಲಾಶಯ ತಿರುವಿನ ಬಳಿ ಭಾನುವಾರ ಸಂಭವಿಸಿದೆ.

ಹಾನಗಲ್ಲ ತಾಲೂಕಿನ ಆರೆಗೊಪ್ಪ ಗ್ರಾಮದ ಮಹಾಬಲೇಶ್ವರ ಸಂಕಪಾಳೆ (38) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹುಡೆ ಗ್ರಾಮದ ಜಾಫರ್ ಸಾಬ್ ದೇವಿಹೋಸೂರ(32) ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಮುಂಡಗೋಡದಿಂದ ಹಾನಗಲ್ಲ ಕಡೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಪಾಳಾದಿಂದ ಮುಂಡಗೋಡದತ್ತ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net