ಕೌಟುಂಬಿಕ ಕಲಹ ಇಬ್ಬರ ಮೇಲೆ ಹಲ್ಲೆ- ಆರೋಪಿ ಬಂಧನ

RAICHUR
RAICHUR
Published on

ರಾಯಚೂರು ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಪತ್ನಿಯ ತಂಗಿಯಗೆ ಚಾಕುವಿನಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ಏಗನೂರು ಗ್ರಾಮದಲ್ಲಿ ಭಾನುವಾರ ಜರುಗಿದೆ.

ಚಾಕುವಿನಿಂದ ಹಲ್ಲೆ ಮಾಡಿದ ಆರೋಪಿ ಏಗನೂರು ಗ್ರಾಮದ ತಿಮ್ಮಪ್ಪ ಯಾದವ. ಪದ್ಮಾವತಿ (೩೦) ಹಾಗೂ ರಾಜಮ್ಮ (೨೩) ಹಲ್ಲೆಗೊಳಗಾದವರು.

ಆರೋಪಿ ತಿಮ್ಮಪ್ಪ ಮೊದಲ ಪತ್ನಿಗೆ ನಾಲ್ಕು ಮಕ್ಕಳು ಇದ್ದರೂ ಮತ್ತೊಬ್ಬಳನ್ನು ಮದುವೆಯಾಗಿ ಮನೆಯಲ್ಲಿ ನಿತ್ಯ ಜಗಳವಾಡುತ್ತಿರುವುದರಿಂದ ಕೌಟುಂಬಿಕ ಕಲಹದಿಂದ ಬೇಸತ್ತು ಪತ್ನಿ ಪದ್ಮಾವತಿ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಳು. ಇದೇ ಸಿಟ್ಟಿನಿಂದ ಪ್ರತಿದಿನ ಮನೆಯಲ್ಲಿ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ. ಪದ್ಮಾವತಿ ತಂಗಿ ರಾಜಮ್ಮಳ ನಿಶ್ಚಿತಾರ್ಥವಾಗಿದ್ದು, ಮದುವೆ ಆಮಂತ್ರಣ ಕೊಡಲು ಅಕ್ಕ ಪದ್ಮಾವತಿಯ ಮನೆಗೆ ಬಂದಿದ್ದಳು.

ಈ ವೇಳೆ ತಿಮ್ಮಪ್ಪ ಯಾದವ ಮನೆಗೆ ಬಂದು ಪದ್ಮಾವತಿ ಜೆತೆಗೆ ಜಗಳ ಮಾಡಿಕೊಂಡು ನಂತರ ಮಾತಿಗೆ ಮಾತು ಬೆಳೆದು ಚಾಕುವಿನಿಂದ ಪದ್ಮಾವತಿ ತಲೆಗೆ ಹೊಡಿದಿದ್ದು, ಬಿಡಿಸಲು ಬಂದ ರಾಜಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಗಭೀರವಾಗಿ ಗಾಯಗೊಂಡ ಇಬ್ಬರನ್ನು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪದ್ಮವತಿ ಸ್ಥಿತಿ ಗಂಭೀರವಾಗಿದೆ.

ಆರೋಪಿಯನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ.ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net