ಬೈಕ್ ತಡೆದು ಇಬ್ಬರಿಗೆ ಹಲ್ಲೆ

Assualt 7 APR 20
Published on

ಕಾಸರಗೋಡು: ಬೈಕ್ ತಡೆದು ನಿಲ್ಲಿಸಿ ಸವಾರರಿಬ್ಬರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜಯಂತ, ವಸಂತ ಸೇರಿದಂತೆ ನಾಲ್ವರ ವಿರುದ್ಧ ಶೇಣಿ ಪಜ್ಜಾಣ ನಿವಾಸಿ ಅಜೀಶ್ ಜೋಸೆಫ್ ಹಾಗೂ ಅವರ ಸ್ನೇಹಿತ ಗಣೇಶ್ ದೂರು ನೀಡಿದ್ದಾರೆ. ಬೈಕಲ್ಲಿ ಬಾಡೂರು ಸನಿಹದ ಓಣಿಬಾಗಿಲು ಬಳಿ ಸಂಚರಿಸುತ್ತಿರುವ ವೇಳೆ, ಸ್ಕೂಟರಲ್ಲಿ ಆಗಮಿಸಿದ ನಾಲ್ವರ ತಂಡ ಬೈಕ್ ತಡೆದು ಹಲ್ಲೆ ನಡೆಸಲಾಗಿದೆ. ಪಂಚಾಯಿತಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ ದ್ವೇಷವೇ ಹಲ್ಲೆಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net