ಮೀಟರ್‌ ಬಡ್ಡಿ ಪ್ರಕರಣ ಇಬ್ಬರ ಬಂಧನ

arrest
Published on
ಹಳಿಯಾಳ: ಮೀಟರ್  ಬಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ
ಹಳಿಯಾಳ ಪಟ್ಟಣದ ರೇಣುಕಾ ಚಲವಾದಿ ಮತ್ತು ವಿಲ್ಸನ್ ಪಾಲಕೇಟಿ ಎಂಬಿಬ್ಬರನ್ನು ಹಳಿಯಾಳ ಪೋಲಿಸರು ಬುಧವಾರ ಬಂಧಿಸಿ ಜೈಲಿಗಟ್ಟಿದ್ದಾರೆ.
ತಮಗಾಗುತ್ತಿರುವ ಅನ್ಯಾಯದ ಬಗ್ಗೆ  ನಸೀಮಾ ಬುಡ್ಡೆಸಾಬನವರ  ಬುಧವಾರ ಠಾಣೆಗೆ ಆಗಮಿಸಿ ಪಟ್ಟಣದ ದೇಶಪಾಂಡೆ ನಗರದ ರೇಣುಕಾ ಬಸವಂತ ಚಲವಾದಿ ಮತ್ತು ವಿಲಸನ್ ಪೀಟರ್ ಪಾಲಕೇಟಿ ಅವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ನಸೀಮಾ ಗಂಡ ಲಿಯಾಖತ ಅವರು 2023 ರಲ್ಲಿ ಮಗಳ ಮದುವೆಗಾಗಿ 3 ಲಕ್ಷ ರೂ. ಕೈಗಡ ಹಣ ಸಾಲವನ್ನು ಪಡೆದುಕೊಂಡಿದ್ದು, ಬಳಿಕ ಬಡ್ಡಿ ಮತ್ತು ಅಸಲು ಸಮೇತ 5 ಲಕ್ಷ 50 ಸಾವಿರ ರೂ. ವಾಪಸ್ ನೀಡಿದ್ದರು ಕೂಡ ಆರೋಪಿಗಳಿಬ್ಬರು ಫೆಬ್ರವರಿ 4 ರಂದು ಲಿಯಾಖತ ಮನೆಗೆ ನುಗ್ಗಿ  ಮನೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿದ್ದಲ್ಲದೇ ಲಿಯಾಖತ ಮಗನ  ಯುನಿಯನ್ ಬ್ಯಾಂಕ ಖಾತೆಯ ಚೆಕ್‌ಗಳನ್ನು ಪಡೆದುಕೊಂಡು ನಿಮ್ಮ ಮೇಲೆ ಚೆಕ್ ಬೌನ್ಸ್ ಕೆಸ್  ದಾಖಲಿಸುತ್ತೇನೆ ಎಂದು ಬೇದರಿಕೆ ಹಾಕಿದ್ದಾಗಿ ದೂರು ದಾಖಲಿಸಲಾಗಿದೆ.‌
ಲಿಯಾಖತ ಅವರ ಕುಟುಂಬ ಮೀಟರ್ ಬಡ್ಡಿ ವ್ಯವಹಾರ ಮಾಡುವವರಿಂದ ಆಗಿರುವ ತೊಂದರೆಯನ್ನು ತೊಡಿಕೊಂಡ ಬಗ್ಗೆ  ಫೆಬ್ರವರಿ ದಿ.10 ರಂದು ವಿಜಯವಾಣಿ ಪತ್ರಿಕೆಯಲ್ಲಿ "ಕಿರುಕುಳ ತಾಳದೆ ಹಾಸಿಗೆ ಹಿಡಿದ ತಂದೆ! ಸಾಲ ತೀರಿಸಲು ಶಾಲೆ ಬಿಟ್ಟು ಕೂಲಿ ಕೆಲಸಕ್ಕಿಳಿದ ಮಗ! , ಹಳಿಯಾಳದಲ್ಲಿ ಮೀಟರ್ ಬಡ್ಡಿಗೆ ನಲುಗಿದ ಕುಟುಂಬ" ಶಿರ್ಷಿಕೆಯಡಿಯಲ್ಲಿ  ವಿಶೇಷ ವರದಿ ಪ್ರಕಟವಾಗಿತ್ತು. ವರದಿ ಪ್ರಕಟವಾದ ಎರಡು ದಿನಗಳಲ್ಲಿ  ಇಬ್ಬರು ಆರೋಪಿತರನ್ನು ಬಂಧಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net