ಹೊಸಪೇಟೆ ಸಿಡಿಪಿಒ ಹುದ್ದೆಗೆ ಇಬ್ಬರು ಅಧಿಕಾರಿಗಳ ಕಿತ್ತಾಟ

16 HPT 1A
Published on

* ಒಬ್ಬರಿಗೆ ಸರ್ಕಾರದ ಆದೇಶ, ಮತ್ತೊಬ್ಬರಿಗೆ ಕೆಎಟಿ ರಕ್ಷೆ

* ಸಿಬ್ಬಂದಿ, ಸಾರ್ವಜನಿಕರಲ್ಲಿ ಗೊಂದಲ

ಹೊಸಪೇಟೆ: ಹೊಸಪೇಟೆ ಸಿಡಿಪಿಒ ಸ್ಥಾನಕ್ಕೆ ಒಬ್ಬರು ಇಬ್ಬರು ಅಧಿಕಾರಿಗಳ ಮಧ್ಯೆ ಹಗ್ಗಜಗ್ಗಾಟ ಶುರುವಾಗಿದೆ. ಒಬ್ಬರು ವರ್ಗವಾಗಿ ಬಂದರೆ, ಮತ್ತೊಬ್ಬರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಿಂದ ತಡೆಯಾಜ್ಞೆ ತಂದಿದ್ದಾರೆ. ಅಲ್ಲದೇ, ಸೋಮವಾರ ಇಬ್ಬರು ಅಧಿಕಾರಿಗಳು ಕಚೇರಿಗೆ ಆಗಮಿಸಿ, ಆಡಳಿತ ನಡೆಸಿದ್ದರಿಂದ ಸಿಬ್ಬಂದಿಗಳು ಗೊಂದಲಕ್ಕೀಡಾಗುವಂತಾಯಿತು.
ಹೊಸದಾಗಿ ವರ್ಗಾವಣೆಯಾಗಿರುವ ಬಂದಿರುವ ಸಿಂಧು ಅಂಗಡಿ ಅವರು ಆಗಮಿಸಿದ ಬಳಿಕ ಹಿಂದಿನ ಸಿಡಿಪಿ ಬಿ.ಟಿ.ಭೋಗೇಶ ಎಂದಿನಂತೆ ಕಚೇರಿಗೆ ಆಗಮಿಸಿದಾಗ ಸಿಬ್ಬಂದಿ ಕ್ಷಣಕಾಲ ಚಕಿತರಾದರು. ಸಿಂಧು ಅವರು ಸಿಡಿಪಿಒ ಕೋಠಡಿಯಲ್ಲಿ ಕುಳಿತಿದ್ದರೆ, ಬಿ.ಟಿ.ಭೋಗೇಶ್ ಹಾಜರಿ ಪುಸ್ತಕಕ್ಕೆ ಸಹಿ ಮಾಡಿ, ಕೆಲವೊತ್ತು ಸಿಬ್ಬಂದಿ ವಿಭಾಗದಲ್ಲಿ ಕುಳಿತಿದ್ದರು. ಕೆಲ ಸಮಯದ ಬಳಿಕ ಭೋಗೇಶ ಅವರು ಇಲಾಖೆಯ ವಾಹನದಲ್ಲಿ ಕಾರಿನಲ್ಲಿ ಫೀಲ್ಡ್ ವಿಸಿಟ್‌ಗೆ ತೆರಳಿದರು ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.
ಈ ವೇಳೆ ಇಬ್ಬರೂ ಒಂದೊಂದು ಕಡತ ಕೇಳುತ್ತಿದ್ದರೆ, ಯಾರ ಮಾತು ಕೇಳಬೇಕು ಎಂಬ ಪ್ರಶ್ನೆ ಕಾಡುತ್ತಿತ್ತು. ಈ ಸುದ್ದಿ ಅಂಗನವಾಡಿ ಮೇಲ್ವಿಚಾಕರು, ಕಾರ್ಯಕರ್ತರಿಗೂ ಹರಡಿದ್ದರಿಂದ ಯಾರ ಆದೇಶ ಪಾಲಿಸಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದರು. ವಿವಿಧ ಕೆಲಸಕಾರ್ಯಗಳ ನಿಮಿತ್ತ ಕಚೇರಿಗೆ ಬರುವ ಸಾರ್ವಜನಿಕರು ಇಬ್ಬರು ಅಧಿಕಾರಿಗಳನ್ನು ಕಂಡು ಬೆರಗಾಗುತ್ತಿದ್ದಾರೆ.

ಅಧಿಕಾರಿಗಳ ಸಂಘರ್ಷಕ್ಕೆ ಕಾರಣವೇನು?
ಈ ಹಿಂದೆ ಯಲ್ಬುರ್ಗಾದಲ್ಲಿ ಸಿಡಿಪಿಒ ಆಗಿದ್ದ ಸಿಂಧು ಅಂಗಡಿ ಅವರನ್ನು ಅ.೧೧ ರಂದು ಹೊಸಪೇಟೆಯ ಶಿಶು ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಅದೇ ದಿನ ಸಂಜೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳ ಉಪ ನಿರ್ದೇಶಕರ ಕಚೇರಿಯಲ್ಲಿ ವರದಿ ಮಾಡಿಕೊಂಡಿದ್ದು, ಅ.೧೨ ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಂತ ವೇತನ ಶ್ರೇಣಿಯಲ್ಲಿದ್ದ ಬಿ.ಟಿ.ಯೋಗೇಶ ಅವ
ನ್ನು ಬಿಡುಗಡೆಗೊಳಿಸುವಂತೆ ಇಲಾಖೆಯ ಉಪನಿರ್ದೇಶಕರು ಆದೇಶಿದ್ದಾರೆ.
ಹೊಸಪೇಟೆ ಸಿಡಿಪಿಒ ಆಗಿದ್ದ ಬೋಗೇಶ್‌ಗೆ ಯಾವುದೇ ಸ್ಥಾನ ಸೂಚಿಸದೇ ವರ್ಗಾಯಿಸಿದ್ದರಿಂದ ಅವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮೆಟ್ಟಿಲೇರಿದ್ದಾರೆ. ೧೦ ತಿಂಗಳ ಹಿಂದಷ್ಟೇ ಈ ಸ್ಥಾನಕ್ಕೆ ಬಂದಿದ್ದು, ಅವಧಿ ಪೂರ್ವ ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಆದೇಶವನ್ನು ಹಿಂಪಡೆಯುವAತೆ ಸೂಚಿಸಬೇಕು ಎಂದು ಬೇಡಿಕೆಯಿದ್ದೆ. ಆ ಹಿನ್ನೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯ ಮಂಡಳಿ ಆದೇಶಿಸಿದೆ. ಹೀಗಾಗಿ ನಾನು ಕರ್ತವ್ಯದಲ್ಲಿದ್ದೇನೆ ಎಂಬುದು ಬೋಗೇಶ ವಾದ.
ಈ ಕುರಿತು ಪ್ರತಿಕ್ರಿಯಿಸಿದ ಸಿಂಧು ಅಂಗಡಿ, ಹೊಸಪೇಟೆಯ ಸಿಡಿಪಿಒ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶವನ್ನು ಪಾಲಿಸುತ್ತಿದ್ದೇನೆ. ಉಪನಿರ್ದೇಶಕರ ಬಳಿ ವರದಿ ಮಾಡಿಕೊಂಡಿದ್ದು, ಅವರ ಸೂಚನೆ ಮೇರೆಗೆ ಕಳೆದ ಗುರುವಾರದಿಂದ ಕಾರ್ಯನಿರ್ವಸುತ್ತಿದ್ದೇನೆ. ಭೋಗೇಶ ಅವರ ವಿಚಾರ ನನಗೆ ಗೊತ್ತಿಲ್ಲ ಎಂದಷ್ಟೇ ಹೇಳಿದರು.

ಇಬ್ಬರೂ ಅಧಿಕಾರಿಗಳು ಒಂದೇ ಹುದ್ದೆಗೆ ಪಟ್ಟು ಹಿಡಿದ್ದರಿಂದ ಕಾನೂನು ಸಮರಕ್ಕೆ ದಾರಿಯಾದರೂ ಅಚ್ಚರಿಯಿಲ್ಲ. ಒಬ್ಬರು ವರ್ಗಾವಣೆಯಾಗಿ ಬಂದಿದ್ದಾರೆ. ಮತ್ತೊಬ್ಬರು ಕೆಎಟಿಯಿಂದ ಸ್ಟೇ ತಂದಿದ್ದಾರೆ. ಆದರೆ, ಹೀಗಾಗಿ ಇಬ್ಬರೂ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ನಮಗೂ ಗೊಂದಲ ಮೂಡಿಸಿದೆ. ಈ ಬಗ್ಗೆ ಮಾರ್ಗದರ್ಶನ ಕೋರಿ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅವರ ಮಾರ್ಗದರ್ಶನದಲ್ಲಿ ಕ್ರಮ ವಹಿಸಲಾಗುವುದು. - ಶ್ವೇತಾ, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net