ಲಂಚ ಪಡೆಯುವ ವೇಳೆ ಟ್ರ‍್ಯಾಪ್; ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು

WhatsApp Image 2023-08-24 at 2.30.47 PM - Copy
Published on

ಧಾರವಾಡ: ನಿವೃತ್ತ ಶಿಕ್ಷಕನಿಂದ ಲಂಚ ಪಡೆಯುತ್ತಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳು ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಡಿಡಿಪಿಯು ಕಚೇರಿಯ ಸೆಕ್ಷನ್ ಆಫೀಸರ್ ದುರ್ಗಾದಾಸ್ ಮಸೂತಿ ಹಾಗೂ ಎಫ್‌ಡಿಎ ನಾಗರಾಜ ಹೂಗಾರ ಎಂಬುವರು ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದ ಅಧಿಕಾರಿಗಳು. ಇವರಿಬ್ಬರೂ ನಿವೃತ್ತ ಶಿಕ್ಷಕ ಸುಭಾಸ್ ಜವರೆಡ್ಡಿ ಎಂಬುವರ ನಿವೃತ್ತಿ ವೇತನ ವಿಚಾರವಾಗಿ 15,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕಚೇರಿಯಲ್ಲೇ 15,000 ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಎಸ್‌ಪಿ ಸತೀಶ ಚಿಟಗುಬ್ಬಿ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಲೋಕಾಯುಕ್ತ ಉಪಾಽÃಕ್ಷಕ ವಿಜಯ ಬಿರಾದಾರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಕೆ.ಬಿ. ಬನ್ನೆ, ಪಿ.ಎಸ್. ಹಿರೇಮಠ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಗಳನ್ನು ಬಂಽಸಿದ್ದು, ಕೆ.ಬಿ. ಬನ್ನೆ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net