ಇಬ್ಬರು ಅಧಿಕಾರಿಗಳು ಲೋಕಾ ಬಲೆಗೆ

mohamd humar
mohamd humar
Published on

ರಾಯಚೂರು ಪೆಟ್ರೋಲ್ ಬಂಕ್ ಒಂದರ ಮಾಲೀಕನಿಂದ 30 ಸಾವಿರ ಲಂಚಪಡೆಯುವಾಗ ಅಧಿಕಾರಿಗಳ ಬಲೆಗೆ ಸೋಮವಾರ ಬಿದ್ದಿದ್ದಾರೆ.

ಕಾರ್ಮಿಕ ಇಲಾಖೆ ನಿರೀಕ್ಷಕ ಮೊಹಮ್ಮದ್ ಉಮರ್,ಮಕ್ಕಳ ಯೋಜನಾಧಿಕಾರಿ ಮಂಜುನಾಥ ರೆಡ್ಡಿ ಲೋಕಾ ಬಲೆಗೆ ಬಿದ್ದ ಅಧಿಕಾರಿಗಳು.

ತಾಲೂಕಿನ ಶಕ್ತಿನಗರದ ಪೆಟ್ರೋಲ್ ಬಂಕ್‌ನಲ್ಲಿ ಬಾಲಕಾರ್ಮಿಕರ ಬಳಕೆ, ನಿಯಮಗಳ ಉಲ್ಲಂಘನೆ ಆರೋಪ ಹಿನ್ನೆಲೆ ಬಂಕ್‌ನ ಮಾಲೀಕನಿಗೆ ಇಬ್ಬರು ಅಧಿಕಾರಿಗಳು ಒಟ್ಟು 70 ಸಾವಿರ ರೂ.ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಮಾಲೀಕ ಭಯಭೀತಗೊಂಡು ಮೊದಲು 40 ಸಾವಿರ ರೂ. ನೀಡಿದ್ದ ನಂತರ ಉಳಿದ 30 ಸಾವಿರ ರೂ,ಯನ್ನು ಕಚೇರಿಯ ಹೊರಗಡೆ ನೀಡುವಾಗ ಲೋಕಾಯುಕ್ತ ಎಸ್ಪಿ ಸತೀಶ್ ಚಿತಗುಪ್ಪಿ ನೇತೃತ್ವದಲ್ಲಿ ದಾಳಿ ಮಾಡಿದ್ದು, ಈ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net