ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕರೊನಾ

carona logo
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಇಬ್ಬರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಬಂಟ್ವಾಳದ 69 ವರ್ಷದ ವ್ಯಕ್ತಿ (ರೋಗಿ 578) ಹಾಗೂ ಮಂಗಳೂರು ಬೋಳೂರಿನ 62 ವರ್ಷದ ವ್ಯಕ್ತಿಯ (ರೋಗಿ 579) ಪರೀಕ್ಷೆಯ ವರದಿ ಶುಕ್ರವಾರ ಪಾಸಿಟಿವ್ ಬಂದಿದೆ.

ಶುಕ್ರವಾರ ಸೋಂಕು ಪತ್ತೆಯಾದ ವ್ಯಕ್ತಿಯು ಏ.1ರಂದು ಮೃತಪಟ್ಟ ಬಂಟ್ವಾಳದ 50 ವರ್ಷದ ಮಹಿಳೆಯ (ರೋಗಿ 390) ನೆರೆಮನೆಯವರಾಗಿದ್ದು, ಸಂಬಂಧಿಯೂ ಹೌದು.

ಬೋಳೂರಿನ 62 ವರ್ಷದ ವ್ಯಕ್ತಿಯು ಗುರುವಾರ ಸೋಂಕು ಪತ್ತೆಯಾದ 58 ವರ್ಷದ ಮಹಿಳೆಯ (ರೋಗಿ 536) ಪತಿ.

ಇವರೆಲ್ಲರೂ ಮಂಗಳೂರಿನ ಫಸ್ಟ್ ನ್ಯೂರೋ ಖಾಸಗಿ ಆಸ್ಪತ್ರೆಯ ಸಂಪರ್ಕದಿಂದ ಸೋಂಕು ತಗುಲಿಸಿಕೊಂಡವರಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. 6 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ, 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net