ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಮತ್ತೆರಡು ಪ್ರಕರಣ

crime
Published on

ಹುಬ್ಬಳ್ಳಿ: ಅಂಗನವಾಡಿಗೆ ಪೂರೈಕೆ ಮಾಡಬೇಕಾದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದದ್ದ ಪ್ರಕರಣದ ಪ್ರಮುಖ ಆರೋಪಿ ಕಾಂಗ್ರೆಸ್ ಕಾರ್ಯಕರ್ತೆ ವಿರುದ್ಧ, ಕಸಬಾ ಪೊಲೀಸ್ ಠಾಣೆಯಲ್ಲಿ ಮತ್ತೆರಡು ಪ್ರಕರಣಗಳು ದಾಖಲಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮನೆ ಶೋಧದ ವೇಳೆ ಅಂಗನವಾಡಿಗೆ ಪೂರೈಸಬೇಕಾದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಈ ಕುರಿತು ಒಂದು ಪ್ರಕರಣ ದಾಖಲಾಗಿದೆ. ಬೇರೆ ಸಮುದಾಯದ ವ್ಯಕ್ತಿ ಜತೆ ಮೊಬೈಲ್ ಫೋನ್‌ನಲ್ಲಿ ಮಾತನಾಡುವಾಗ ಭಾವನೆಗೆ ಧಕ್ಕೆ ಬರುವ ಹಾಗೆ ಮಾತನಾಡಿದ್ದಾರೆ ಎಂದು ಆರೋಪಿಸಿ, ಕಾರ್ಯಕರ್ತೆ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಹಣಕಾಸಿನ ವ್ಯವಹಾರದ ಕುರಿತು ಕೆಲವಷ್ಟು ಆರೋಪಗಳು ಕೇಳಿ ಬಂದಿದ್ದು, ಆ ಕುರಿತು ಸಹ ಕೆಲವರು ದೂರು ನೀಡಲು ಮುಂದೆ ಬಂದಿದ್ದಾರೆ. ಪ್ರಮುಖ ಆರೋಪಿಗಳು ಹೊರ ರಾಜ್ಯದಲ್ಲಿರುವ ಮಾಹಿತಿ ಲಭಿಸಿದೆ. ಅಲ್ಲಿಯ ಪೊಲೀಸರ ಸಹಾಯ ಪಡೆದು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net