

ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆಯಲ್ಲಿ ಇತ್ತೀಚೆಗೆ ನಡೆದಿದ್ದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಮೀರ ಬೇಪಾರಿ (28), ಹಮೀದ್ ಬೇಪಾರಿ (34) ಬಂಧಿತರು. ಬಂಧಿತರಿಂದ 3 ತಲ್ವಾರ್ ಜಪ್ತಿ ಮಾಡಿ, ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಕೈಯಲ್ಲಿ ತಲ್ವಾರ್ ಹಿಡಿದು ಹೆದರಿಸಿದ್ದ ಸಮೀರ್‌ನನ್ನು ಜೂ. 11ರಂದು ರಾತ್ರಿ 8.45ರ ಸುಮಾರಿಗೆ ವಶಕ್ಕೆ ಪಡೆದು ಬರುತ್ತಿದ್ದಾಗ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಗದಗ ರಸ್ತೆಯ ಡೌನ್ ಚಾಳದಲ್ಲಿ ವಶಕ್ಕೆ ಪಡೆಯಲಾಗಿದೆ. ಇಲ್ಲಿಯವರಿಗೆ ಒಟ್ಟು 22 ಜನರನ್ನು ಬಂಧಿಸಿದಂತಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.