ಗೋಶಾಲಾ ಕಟ್ಟಡಕ್ಕೆ ಎರಡು ಲಕ್ಷ ರೂ.ದೇಣಿಗೆ

31bhr 2
Published on

ಬಾಳೆಹೊನ್ನೂರು: ಹುಯಿಗೆರೆ ಗ್ರಾಮದ ಶಂಕರ ಭಾರತಿ ಗೋ ಶಾಲಾ ಟ್ರಸ್ಟ್ ಕಟ್ಟಡ ನಿರ್ಮಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷ ರೂ.ಮೊತ್ತದ ಚೆಕ್‌ಅನ್ನು ಇತ್ತೀಚೆಗೆ ಗೋ ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.
ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಸದಾನಂದ ಬಂಗೇರ ಚೆಕ್ ವಿತರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಗೋವುಗಳ ಸೇವೆಯನ್ನು ಗೋ ಶಾಲೆ ಮುಖಾಂತರ ಮಾಡುತ್ತಿರುವುದು ಶ್ಲಾಘನೀಯ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ 2 ಲಕ್ಷದ ರೂ.ಚೆಕ್ ಅನ್ನು ಯೋಜನೆ ಮೂಲಕ ಹಸ್ತಾಂತರಿಸಲಾಗಿದೆ. ಈ ಹಣ ಸದುಪಯೋಗವಾಗಿ ಗೋವುಗಳ ಸೇವೆ ಲಭ್ಯವಾಗಲಿ ಎಂದರು.
ಗೋ ಶಾಲಾ ಮುಖ್ಯಸ್ಥ ಪ್ರವೀಣ್ ಖಾಂಡ್ಯ, ಹುಯಿಗೆರೆ ಗ್ರಾಪಂ ಅಧ್ಯಕ್ಷೆ ಸುಚನಾ, ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸುರೇಶ್, ಜನಜಾಗೃತಿ ವೇದಿಕೆ ಸದಸ್ಯ ಮುರಳೀಧರ್‌ಭಟ್, ಸುಜಯ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಮಹೇಶ್, ಚಂದ್ರಶೇಖರ್ ರೈ, ಕ್ಯಾಪ್ಟನ್ ಅಜಿತ್, ಒಕ್ಕೂಟದ ಅಧ್ಯಕ್ಷ ಶಿವಪ್ಪ, ಗಣೇಶ್, ಕಾಫಿ ಬೆಳೆಗಾರ ಹರೀಶ್, ವಲಯ ಮೇಲ್ವಿಚಾರಕ ಪಿ.ಸುರೇಶ್, ಸೇವಾಪ್ರತಿನಿಧಿ ಅವಿನಾಶ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಾದ ಸುರೇಶ್ ಕೋಟಿಯಾನ್, ಮಂಜುನಾಥ್, ಮಹೇಶ್, ರಾಕೇಶ್, ಅಭಿಷೀಕ್, ಪ್ರಮೋದ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net