

ಅಥಣಿ ಗ್ರಾಮೀಣ: ಅಥಣಿ ತಾಲೂಕಿನಲ್ಲಿ ಭಾನುವಾರ ನಡೆದ ಎರಡು ಪತ್ಯೇಕ ಟನೆಯಲ್ಲಿ ಅಪರಿಚಿತ ವಾಹನ ಹಾಯ್ದು ಇಬ್ಬರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡಿದ್ದಾನೆ.
ಭರಮಖೋಡಿ ಕ್ರಾಸ್ ಬಳಿ ಅಥಣಿ& ಜತ್ತ ಸಂಪರ್ಕ ರಸ್ತೆ ಮೇಲೆ ವಾಹನ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಗುಂಡೇವಾಡಿ ಗ್ರಾಮದ ಶಿವರಾಜ ಶಿತಾರಾಮ ಜಾಗವಾನಕರ (34) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ ಟ್ರಾ$್ಯಕ್ಟರ್ ಚಾಲಕನಾಗಿದ್ದು, ಅಥಣಿ ಕಡೆಯಿಂದ ಸ್ವಗ್ರಾಮಕ್ಕೆ ಬೈಕ್ ಮೇಲೆ ಹೋಗುತ್ತಿದ್ದಾಗ ಅಪಘಾತವಾಗಿದೆ.
ಮತ್ತೊಂದು ಪ್ರಕರಣದಲ್ಲಿ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಿ ಹೋಗುತ್ತಿದ್ದಾಗ ಅಪರಿಚಿತ ವಾಹನ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಸಪ್ತಸಾಗರ ಗ್ರಾಮದ ರಾಜೇಸಾಬ್ ಮಕ್ತುಮಸಾಬ್ ಜಮಾದಾರ (75) ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡಿರುವ ಬೈಕ್ ಸವಾರ ಪ್ರಕಾಶನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿದ್ದ ರಾಜೇಸಾಬ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಕೊನೆಯುಸಿರೆಳೆದಿದ್ದಾನೆ.
ಎರಡೂ ಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಸ್ಥಳಕ್ಕೆ ಎಎಸ್ಐ ವಿಠ್ಠಲ ದೇವಮಾನೆ, ತನಿಖಾ ಸಹಾಯಕ ಎಚ್.ವೈ.ಮೇಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.