ಕಾರುಗಳ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವು

07 HHR P 05 (1)
ರಸ್ತೆ ಅಪಘಾತದಲ್ಲಿ ಜಖಂಗೊAಡಿರುವ ಕಾರು.
Published on

ಹೊಳೆಹೊನ್ನೂರು: ಜಾವಳ್ಳಿ ತಿರುವಿನಲ್ಲಿ ಗುರುವಾರ ಕಾರು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಆರು ವರ್ಷದ ಮಗು ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಶಿವಮೊಗ್ಗ ಇಲಿಯಾಸ್ ನಗರದ ಅಫ್ತಾಬ್ ಬಾಷಾ(36), ದಿಯಾ ಮಿನಲ್(12) ಮೃತ ದುರ್ದೈವಿಗಳು. ಅಪಘಾತದ ರಭಸಕ್ಕೆ ಕಾರು ಹೆದ್ದಾರಿ ಪಕ್ಕದ ತಗ್ಗಿಗೆ ಉರುಳಿ ಬಿದ್ದಿದೆ. ಅಫ್ತಾಬ್ ಬಾಷಾ ಹಾಗೂ ಆತನ ಅಕ್ಕನ ಮಗಳು ದಿಯಾ ಮಿನಲ್ ಸ್ಥಳದಲ್ಲೇ ಮೃತಪಟ್ಟರು.
ಶಿವಮೊಗ್ಗ-ಚಿತ್ರದುರ್ಗ ರಾಷ್ಟಿçÃಯ ಹೆದ್ದಾರಿಯಲ್ಲಿ ಜಾವಳ್ಳಿ ಬಳಿ ಗುರುವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ. ಅಫ್ತಾಬ್ ಕಾರಿನಲ್ಲಿ ಸಂಬAಽಕರ ಜತೆಗೆ ಶಿವಮೊಗ್ಗದಿಂದ ಚನ್ನಗಿರಿ ಕಡೆ ಹೋಗುವಾಗ ಚಿತ್ರದುರ್ಗದ ಕಡೆಯಿಂದ ಬರುತ್ತಿದ್ದ ಬೆಂಗಳೂರು ಮೂಲದವರಿದ್ದ ಕಾರಿಗೆ ಡಿಕ್ಕಿಯಾಗಿದೆ. ಅಫ್ತಾಬ್ ಬಾಷಾ ಚಲಾಯಿಸುತ್ತಿದ್ದ ಕಾರು ಸಂಪೂರ್ಣ ಜಖಂಗೊAಡಿದ್ದು ಕಾರಿನಲ್ಲಿ ಆರು ವರ್ಷದ ಮಗು ಸೇರಿ 6 ಮಂದಿ ಪ್ರಯಾಣಿಸುತ್ತಿದ್ದರು. ಅಫ್ತಾಬ್ ಕಾರಿನಲ್ಲಿದ್ದ ಶಾಹೀದ್ ಬಾನು, ಮುಬಿನಾ, ಸದಫ್ ಸೇರಿ ಆರು ವರ್ಷದ ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಟ್ಜ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ವಿಜಯಪುರ ಬಡಾವಣೆ ನಿವಾಸಿಗಳಾದ ಸುಬ್ರಹ್ಮಣ್ಯ, ನಾಗರಾಜ್, ಅನಿರುದ್ಧಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net