

ಹುಬ್ಬಳ್ಳಿ: ನಗರ ಹೊರವಲಯದ ಬೈಪಾಸ್‌ನಲ್ಲಿ ಮತ್ತೆರಡು ಜೀವ ಹೋಗಿವೆ. ಭಾನುವಾರ ಬೆಳಗ್ಗೆ 1ಗಂಟೆ ಸುಮಾರಿಗೆ ದ್ವಿಚಕ್ರವಾಹನಕ್ಕೆ ಕಾರ್‌ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕುಂದಗೋಳದ ಶಿವಪ್ಪ ದೊಡ್ಡಮನಿ(28), ಗದಿಗೆಪ್ಪ ಮೆನಗೊಂಡ (27)ಮೃತರು. ಕಾರ್ ಕೊಲ್ಲಾಪುರದಿಂದ ಶಿವಮೊಗ್ಗಕ್ಕೆ ಹೊರಟಿತ್ತು. ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ ಗೋಕಾಕ ತಿಳಿಸಿದ್ದಾರೆ.