

ಬೆಳಗಾವಿ: ರಸ್ತೆ ಪಕ್ಕದ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಟನೆ ಬೆಳಗಾವಿ&ಬಾಗಲಕೋಟೆ ರಾಜ್ಯ ಹೆದ್ದಾರಿನ ಸೋಮನಟ್ಟಿ ಬಳಿ ಭಾನುವಾರ ನಡೆದಿದೆ. ಬೆಳಗಾವಿ ತಾಲೂಕಿನ ಕರಿಕಟ್ಟಿ ಗ್ರಾಮದ ಚಾಲಕ ಸಚಿನ ಬೋರಿಮರದ(21) ಮತ್ತು ಬಾಲಕೃಷ್ಣ ಸುಲದಾಳ(19) ಮೃತರು. ತಮ್ಮೂರಿನಿಂದ ಸವದತ್ತಿ ತಾಲೂಕಿನ ಗೋವಿನಕೊಪ್ಪ ಗ್ರಾಮದಲ್ಲಿ ನಾಟಿ ಔಷಧ ತೆಗೆದುಕೊಳ್ಳಲು ತೆರಳಿದ್ದರು. ಔಷಧ ಪಡೆದುಕೊಂಡು ವಾಪಸ್ ಬರುವಾಗ ಸೋಮನಟ್ಟಿ ಬಳಿ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ನೇಸರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.