

ಕುಟ್ಟಿಪುರಂ: ಎರ್ನಾಕುಲಂಗೆ ಪ್ರವಾಸಕ್ಕೆಂದು ಕರ್ನಾಟಕದಿಂದ ತೆರಳಿದ್ದವರ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಪಾಂಡುರಂಗ (34) ಮತ್ತು ಪ್ರಭಾಕರ್ (50) ಮೃತರು. ಇವರನ್ನು ಚಿತ್ರದುರ್ಗದ ಹಿರಿಯೂರಿನವರು ಎಂದು ಗುರುತಿಸಲಾಗಿದೆ. ಪಾಂಡುರಂಗ ಅವರು ಹಿರಿಯೂರು ಪುರಸಭೆ ಸದಸ್ಯರು. ಇವರೊಂದಿಗೆ ಇದ್ದ 6 ಮಂದಿಗೆ ಗಂಭೀರ ಗಾಯವಾಗಿದ್ದು ಅವರನ್ನೆಲ್ಲ ವಾಲಂಚೇರಿ ಮತ್ತು ಪೆರಿಂದಲ್ಮಣ್ಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಡಿಕ್ಕಿಯಾದ ಪರಿಣಾಮ ಇವರ ವಾಹನ ಸಂಪೂರ್ಣ ಜಖಂ ಆಗಿದೆ.