ರಾಜ್ಯದಲ್ಲಿ ಗುರುವಾರ ಇಬ್ಬರು ಪತ್ರಕರ್ತರು ಕೋವಿಡ್-19 ಸೋಂಕಿ​ಗೆ ಬಲಿ

Journo
ಜಾಫರ್ ಕಲಾದಗಿ, ಎ.ಎಂ. ವೆಂಕಟೇಶ್​
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಎರಡನೇ ಅಲೆಯ ಹಾವಳಿ ಕಗ್ಗಂಟಾಗಿದ್ದು, ತೀವ್ರ ಬಿಕ್ಕಟ್ಟಿನ ಪರಿಸ್ಥಿತಿ ತಂದಿಟ್ಟಿದೆ. ಸೋಂಕಿನ ಪ್ರಮಾಣ ಮಾತ್ರವಲ್ಲದೆ, ಕರೊನಾದಿಂದಾಗಿ ಸಾವಿಗೀಡಾತ್ತಿರುವವರ ಸಂಖ್ಯೆಯೂ ತೀವ್ರಗತಿಯಲ್ಲಿ ಏರುತ್ತಿದೆ. ಈ ಮಧ್ಯೆ ಗುರುವಾರವೊಂದೇ ದಿನ ರಾಜ್ಯದಲ್ಲಿ ಇಬ್ಬರು ಪತ್ರಕರ್ತರು ಕೋವಿಡ್​-19 ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ.

ವಿಜಯಪುರ ಜಿಲ್ಲೆಯ ಪತ್ರಕರ್ತ ಜಾಫರ್ ಕಲಾದಗಿ (42) ಹಾಗೂ ಕೋಲಾರ ಜಿಲ್ಲೆಯ ಪತ್ರಕರ್ತ ಎ.ಎಂ. ವೆಂಕಟೇಶ್​ ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. 'ಬಿಜಾಪುರ ಮಿರರ್' ಇಂಗ್ಲಿಷ್ ದಿನಪತ್ರಿಕೆ ನಡೆಸುತ್ತಿದ್ದ ಜಾಫರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದರು.

ಬಂಗಾರಪೇಟೆ ತಾಲೂಕಿನಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್​ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತಪಟ್ಟಿರುವ ಪತ್ರಕರ್ತರಿಬ್ಬರ ಆತ್ಮಕ್ಕೆ ಶಾಂತಿ ಸಿಗಲಿ, ಅವರಿಬ್ಬರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net