ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ

crime123
Published on

ಬೆಳಗಾವಿ: ನಗರದಲ್ಲಿ ಮನೆಗಳ್ಳತನ ಪ್ರಕರಣಕ್ಕೆ ಸಂಬಂಸಿದಂತೆ ಪೊಲೀಸರು ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಸಿ 11.83 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಮಧ್ಯಪ್ರದೇಶದ ವಖಾರ್‌ಅಹ್ಮದ್ ಅನ್ವರ್ ಶೇಖ್ ಹಾಗೂ ಶುಭಂ ಭಗವಾನಸಿಂಗ್ ಮುಛಾಲಾ ಬಂತರು.

2025 ಜನವರಿ 16ರಂದು ಗಣೇಶಪುರ ಸರಸ್ವತಿ ನಗರದ ಅಂಥೋಣಿ ಡಿಕ್ರೂಸ್ ಅವರು ಮನೆಗೆ ಕೀಲಿ ಹಾಕಿ ಪತ್ನಿಯ ಜತೆ ಮಗಳ ಮನೆಗೆ ರಾಜಸ್ಥಾನಕ್ಕೆ ಹೋಗಿದ್ದರು. ಮನೆಯಲ್ಲಿದ್ದ 17.28 ಲಕ್ಷ ರೂ.ವೌಲ್ಯದ ಚಿನ್ನಾಭರಣ ಹಾಗೂ 40 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು.

ಈ ಬಗ್ಗೆ ೆಬ್ರವರಿ 1ರಂದು ಕ್ಯಾಂಪ್‌ನ ಜೀತೇಂದ್ರ ಬಾಳಕೃಷ್ಣ ಶಿಂಧೆ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ಮಧ್ಯಪ್ರದೇಶದ ಕಳ್ಳರನ್ನು ಬಂಸಿ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಕ್ಯಾಂಪ್ ಇನ್ಸ್‌ಪೆಕ್ಟರ್ ಅಲ್ತಾಫ್ ಎಂ., ಉದ್ಯಮಬಾಗ ಪಿಎಸ್‌ಐ ಕಿರಣ ಹೊಣಕಟ್ಟಿ, ಸಿಬ್ಬಂದಿ ಬಸವರಾಜ ಉಜ್ಜಿನಕೊಪ್ಪ, ಜೆ.ಎಸ್. ಲಮಾಣಿ, ಎಂ. ತೇಲಿ, ಎಚ್.ವೈ. ವಿಭೂತಿ, ಸಂತೋಷ ಬರಗಿ, ಎಂ.ಎಸ್. ಲಮಾಣಿ, ಆರ್.ಎಸ್. ಅಕ್ಕಿ ಕಾರ್ಯಾಚರಣೆಯಲ್ಲಿದ್ದರು. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net