ಇಬ್ಬರು ಅಂತಾರಾಜ್ಯ ಬೈಕ್ ಕಳ್ಳರ ಬಂಧನ

22Kudachi1
ಕುಡಚಿ ಪೊಲೀಸರು ಎಂಟು ಬೈಕ್ ವಶಪಡಿಸಿಕೊಂಡಿರುವುದು. ಸಿಪಿಐ ರವಿಚಂದ್ರ ಡಿ.ಬಿ., ಪಿಎಸ್‌ಐಗಳಾದ ಪ್ರೀತಂ ನಾಯಿಕ, ಎಸ್.ಬಿ.ಖೋತ, ಎಎಸ್‌ಐಗಳಾದ ಕೆ.ಆರ್.ಸಾಳುಂಕೆ, ಎಚ್.ಎಸ್.ಗುಡ್ಡದ ಇತರರಿದ್ದಾರೆ.
Published on

ಕುಡಚಿ: ಪಟ್ಟಣದಲ್ಲಿ ಸೋಮವಾರ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿರುವ ಪೊಲೀಸರು ಎಂಟು ಬೈಕ್ ವಶಪಡಿಸಿಕೊಂಡಿದ್ದಾರೆ. ಕುಡಚಿ, ಶೆಡಬಾಳ ಹಾಗೂ ಕಾಗವಾಡ ಪಟ್ಟಣಗಳಲ್ಲಿ ಬೈಕ್ ಕಳ್ಳತನ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಥಣಿ ಡಿವೈಎಸ್‌ಪಿ ಎಸ್.ಡಿ.ಜಲ್ದೆ, ಹಾರೂಗೇರಿ ಸಿಪಿಐ ರವಿಚಂದ್ರ ಡಿ.ಬಿ. ಮಾರ್ಗದರ್ಶನದಲ್ಲಿ ಕುಡಚಿ ಠಾಣೆಯ ಪಿಎಸ್‌ಐ ಪ್ರೀತಂ ನಾಯಿಕ, ಅಪರಾಧ ಪಿಎಸ್‌ಐ ಎಸ್.ಬಿ.ಖೋತ, ಎಎಸ್‌ಐಗಳಾದ ಕೆ.ಆರ್.ಸಾಳುಂಕೆ, ಎಚ್.ಎಸ್.ಗುಡ್ಡದ ಹಾಗೂ ಸಿಬ್ಬಂದಿ ಸಿದಗೌಡ ಪಾಟೀಲ ಇತರರು ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net