ಸಮಾಜದ ಅಭಿವೃದ್ಧಿಗೆ ಎರಡು ಸಂಸ್ಥೆ ಅವಶ್ಯವಿಲ್ಲ

Two institutions are not necessary for the development of society.
Two institutions are not necessary for the development of society.
Published on

ಗುಳೇದಗುಡ್ಡ: ಶಿವಸಿಂಪಿ ಸಮಾಜ ಅಭಿವೃದ್ಧಿ ಸಂಸ್ಥೆ ಅಧಿಕೃತ ಶಿವಸಿಂಪಿ ಸಮಾಜದ ನೊಂದಾಯಿತ ಸಂಸ್ಥೆಯಾಗಿದ್ದು, ಪಟ್ಟಣದಲ್ಲಿ ಇನ್ನೊಂದು ಸಂಸ್ಥೆ ಹುಟ್ಟಿಕೊಂಡು ಸಮಾಜದಲ್ಲಿ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಇದು ಸಮಾಜದ ಬೆಳವಣಿಗೆಗೆ ಪೂರಕವಲ್ಲ ಎಂದು ಸಮಾಜ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮಹಾಲಿಂಗಪ್ಪ ಕರನಂದಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ಸಮಾಜದ ಹೆಸರಿನ ಎರಡು ಸಂಸ್ಥೆ ಹುಟ್ಟುಕೊಂಡರೆ ಸಮಾಜದಲ್ಲಿ ಒಡಕು ಮೂಡುತ್ತದೆ. ಶಿವದಾಸಮಾರ್ಯ ಶಿವಸಿಂಪಿ ಸಮಾಜ ಅಭಿವೃದ್ಧಿ ಸಂಸ್ಥೆಯೇ ಅಧಿಕೃತವಾಗಿದ್ದು, ಸಂಸ್ಥೆಯ ವತಿಯಿಂದ ತಾಲೂಕು ಸಮಾವೇಶ, ಜಿಲ್ಲಾ ಸಮಾವೇಶ, ಸಮಾಜದ ಹಳೇ ಕಟ್ಟಡದ ನವೀಕರಣ ಮಾಡುತ್ತಿದ್ದೇವೆ. ಸರ್ಕಾರದ ಅನುದಾನಕ್ಕೆ ಅಡ್ಡಿಪಡಿಸಲು ಕೆಲವು ಅಂಸತೋಷ ಮನಸ್ಸಿನವರು ಹೀಗೆ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆ ಕಳೆದ ಏಳು ವರ್ಷಗಳಿಂದ ಸಮಾಜದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದೆ ಎಂದರು.

ಸಮಾಜದ ಬೆರಳೆಣಿಕೆಯಷ್ಟು ಜನರು ಕೂಡಿಕೊಂಡು ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ. ನನ್ನ ಪರವಾನಿಗೆ ಇಲ್ಲದೇ ನನ್ನನ್ನು ಗೌರವಾಧ್ಯಕ್ಷರೆಂದು ಪರಿಗಣಿಸಿದ್ದಾರೆ. ಕೆಲವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಸಂಸ್ಥೆ ಉಪಾಧ್ಯಕ್ಷ ಅಶೋಕ ಅಥಣಿ, ಕಾರ್ಯದರ್ಶಿ ಮುತ್ತು ಮೊರಬದ, ವಿಜಯ ಹಡಗಲಿ, ಸಂಗಪ್ಪ ಚೆಟ್ಟೇರ, ರಾಚಣ್ಣ ನಾಗಠಾಣ, ವಿರಸಂಗಪ್ಪ ಕರಡಿ, ಸಿದ್ದು ಅಥಣಿ, ರಾಜಣ್ಣ ಮಂಟಾ, ಸಹನಾ ಗಂಗಾವತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net