ಆಸಿಡ್ ತುಳಿದು ತಂದೆ ಮತ್ತು ಮಗನ ಕಾಲುಗಳಿಗೆ ಗಂಭೀರ ಗಾಯ: ಆಸ್ಪತ್ರೆಯಲ್ಲಿ ಇಬ್ಬರ ನರಳಾಟ..!!!

Two injured by acid mandya
Published on

ಮದ್ದೂರು: ತಾಲೂಕಿನ ಸೋಮನಹಳ್ಳಿಯ ಕೆ.ಕೋಡಿಹಳ್ಳಿಗೆ ಹೋಗುವ ರಸ್ತೆಯ ಪಕ್ಕ ಕಿಡಿಗೇಡಿಗಳು ಹಾಕಿದ್ದ ಆ್ಯಸಿಡ್ ಮತ್ತು ಕೆಮಿಕಲ್ಸ್ ತುಳಿದು ಇಬ್ಬರ ಕಾಲುಗಳಿಗೆ ತೀವ್ರವಾಗಿ ಗಾಯವಾಗಿದೆ.

ಸೋಮನಹಳ್ಳಿ ಗ್ರಾಮದ ರೈತ ಪ್ರಕಾಶ್ ಹಾಗೂ ಪುತ್ರ ರೋಹಿತ್ ಅವರ ಕಾಲುಗಳಿಗೆ ತೀವ್ರವಾಗಿ ಗಾಯಗೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಜಮೀನ ಬಳಿ ಕುರಿಗಳನ್ನು ಮೇಯಿಸುವ ಸಂದರ್ಭದಲ್ಲಿ ಕುರಿಗಳನ್ನು ಮುಂದಕ್ಕೆ ಹೊಡೆಯಲು ಹೋದಾಗ, ಅಲ್ಲಿದ್ದ ವಿಷ ಪೂರಿತ ಕೆಮಿಕಲ್ಸ್ ಆಸಿಡ್ ತುಳಿದು ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿದ್ದ ಗ್ರಾಮಸ್ಥರು ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಜಮೀನಿನ ಬಳಿ ಏನಿದೆ? ಏಕೆ ಹೀಗಾಯಿತು? ಅಲ್ಲಿ ಏನು ಹಾಕಿದ್ದಾರೆ? ಎಂಬ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಮುಂದೆ ಈ ರೀತಿಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net